Lifestyle

ನಿದ್ದೆ ಮಾಡಿ 9 ಲಕ್ಷ ರೂಪಾಯಿ ಸಂಪಾದಿಸಿದ ಬೆಂಗಳೂರಿನ ಈ ಯುವತಿ!

ಬೆಂಗಳೂರು; ಬೆಳಗ್ಗೆ ಬೇಗ ಏಳಬೇಕು.. ದಿನಕ್ಕೆ ಎಂಟು ಗಂಟೆಯಷ್ಟೇ ನಿದ್ದೆ ಮಾಡಬೇಕು.. ಉಳಿದ ಸಮಯದಲ್ಲಿ ದುಡಿಮೆ ಮಾಡಬೇಕು ಅಂತಾರೆ.. ಆದ್ರೆ ಇಲ್ಲೊಬ್ಬ ಯುವತಿ ನಿದ್ದೆ ಮಾಡಿ 9 ಲಕ್ಷ ರೂಪಾಯಿ ಗಳಿಸಿದ್ದಾಳೆ.. ಇಂಗ್ಲೀಷ್‌ ದಿನಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದೆ.. ಸಾಯೀಶ್ವರಿ ಪಾಟೀಲ್‌ ಎಂಬ ಯುವತಿ, ಚೆನ್ನಾಗಿ ನಿದ್ರೆ ಮಾಡಿದ್ದಕ್ಕಾಗಿ 9 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾಳೆ ಎಂದು ತಿಳಿದುಬಂದಿದೆ..
ಬೆಂಗಳೂರಿನ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿರುವ ಸಾಯೀಶ್ವರಿ ಎಂಬಾಕೆಗೆ, ನಿದ್ದೆ ಮಾಡುವಾಗ ತಾನು ಕಂಡ ಕನಸುಗಳೇ ಲಾಭ ತಂದುಕೊಟ್ಟಿವೆ.. ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ವೇಕ್‌ಫಿಟ್‌ನ ಸ್ಲೀಪ್ ಇಂಟರ್ನ್‌ಶಿಪ್ ಕಾರ್ಯಕ್ರಮದ ಮೂರನೇ ಸೀಸನ್‌ನಲ್ಲಿ ಭಾಗವಹಿಸಿರುವ ಸಾಯೀಶ್ವರಿ ‘ಸ್ಲೀಪ್ ಚಾಂಪಿಯನ್’ ಪ್ರಶಸ್ತಿಯನ್ನು ಗೆದ್ದಿದ್ದು, 9 ಲಕ್ಷ ರೂಪಾಯಿ ತನ್ನದಾಗಿಸಿಕೊಂಡಿದ್ದಾಳೆ..
ಸಾಯೀಶ್ವರಿ ಅವರು 12 ‘ಸ್ಲೀಪ್ ಇಂಟರ್ನ್‌’ ಗಳಲ್ಲಿ ಇಬ್ಬರಾಗಿದ್ದರು. ಇವರು ಎಲ್ಲರನ್ನೂ ಹಿಂದಿಕ್ಕಿ ಬಹುಮಾನ ಗಳಿಸಿದ್ದಾರೆ.. ಈ ಕಾಂಪಿಟೇಷನ್‌ನಲ್ಲಿ ಭಾಗವಹಿಸುವವರು ಪ್ರತಿ ರಾತ್ರಿ ಕನಿಷ್ಠ ಎಂಟರಿಂದ ಒಂಬತ್ತು ಗಂಟೆಗಳ ಕಾಲ ಮಲಗಬೇಕು.

Share Post