Bengaluru

ಮದುವೆಗೆ ಹೋಗಿದ್ದ ತಾಯಿ, ಮಗನಿಗೆ ಒಮಿಕ್ರಾನ್ ಪತ್ತೆ

ಬೆಂಗಳೂರು: ಮದುವೆಗೆ ಹೋಗಿ ನಗರದ ಆದರ್ಶ ಫಾರ್ಮ್ ರೀಟ್ರೀಟ್​ನಲ್ಲಿ ತಾಯಿ ಮತ್ತು ಮಗನಿಗೆ ಒಮಿಕ್ರಾನ್ ಸೋಂಕು ದೃಢವಾಗಿದೆ. ಮಹದೇವಪುರದ ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ರೀಟ್ರೀಟ್ ವಿಲ್ಲಾದಲ್ಲಿ 70 ವರ್ಷದ ತಾಯಿ ಮತ್ತು 36 ವರ್ಷದ ಮಗನಿಗೆ ಒಮಿಕ್ರಾನ್ ದೃಢಪಟ್ಟಿದೆ. ದೆಹಲಿಯಲ್ಲಿ ನಡೆದ ಮದುವೆಗೆ ತಾಯಿ ಹಾಗೂ ಮಗ ತೆರಳಿದ್ದರು. ನಂತರ ಡಿಸೆಂಬರ್ 3ರಂದು ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಿದ್ದರು. ಅಂತರಾಷ್ಟ್ರೀಯ ಪ್ರಯಾಣಿಕರಲ್ಲದ ಕಾರಣ ಕ್ವಾರಂಟೈನ್ ಆಗದೆ ನೇರವಾಗಿ ಮನೆಗೆ ಬಂದಿದ್ದರು. ಆದರೆ ದೆಹಲಿಯಲ್ಲಿ ಒಮಿಕ್ರಾನ್ ದೃಢಪಟ್ಟ ಸೋಂಕಿತನ ಪ್ರಾಥಮಿಕ ಸಂಪರ್ಕಿತರು ಎಂದು ಪರೀಕ್ಷೆ ಮಾಡಿದಾಗ ತಾಯಿ ಹಾಗೂ ಮಗನಿಗೂ ಸೋಂಕು ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ದೇವರಬಿಸನಹಳ್ಳಿಯ ವಿಲ್ಲಾಗೆ ಆರೋಗ್ಯ ಅಧಿಕಾರಿಗಳು ಆಗಮಿಸಿದ್ದಾರೆ. ಒಮಿಕ್ರಾನ್ ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಕೊವಿಡ್ ಟೆಸ್ಟ್​ ಮಾಡುತ್ತಿದ್ದು, ಅಧಿಕಾರಿಗಳು ಸಾಮೂಹಿಕವಾಗಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ ಇದೇ ಅಪಾರ್ಟ್​ಮೆಂಟ್​ನ ಕೆಲವರಿಗೆ ಕೊರೊನಾ ಸೋಂಕು ದೃಢವಾಗಿರುವುದು ಪತ್ತೆಯಾಗಿದೆ.

Share Post