CrimeDistricts

ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ; ಅಷ್ಟಕ್ಕೂ ನಡೆದಿದ್ದೇನು..?

ದಾವಣಗೆರೆ; ಇತ್ತೀಚೆಗೆ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ನಡೆದಿತ್ತು.. ಇದೀಗ ದಾವಣಗೆರೆಯಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.. ಇಲ್ಲಿ ಗಣೇಶ ಮೆರವಣಿಗೆ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ್ದು, ಘರ್ಷಣೆಗೆ ಕಾರಣವಾಗಿದೆ.. ಮೆರವಣಿಗೆ ಉದ್ದಕ್ಕೂ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಎಂದು ತಿಳಿದುಬಂದಿದೆ..
ದಾವಣಗೆರೆ ನಗರದ ಹಾಸಭಾವಿ ಸರ್ಕಲ್‌ ಹಾಗೂ ಬೇತೂರು ಬಳಿ ಈ ಕಲ್ಲು ತೂರಾಟ ನಡೆದಿದೆ.. ದಾವಣಗೆರೆಯ ಬೇತೂರಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯಕ್ರಮ ನಿನ್ನೆ ರಾತ್ರಿ ನಡೆದಿದೆ.. ಈ ವೇಳೆ ದುರ್ಘಟನೆ ನಡೆದಿದೆ.. ಅರಳಿ ಮರ, ಬೇತೂರು ರಸ್ತೆ, ಅಶೋಕ ರಸ್ತೆ, ಹಾಸಭಾವಿ ಸರ್ಕಲ್‌ ಬಳಿ ಮೆರವಣಿಗೆ ಬಂದಾಗಿ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ.. ಹೀಗಾಗಿ ಈ ಸ್ಥಳಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು.. ಕಡಿಮೆ ಸಿಬ್ಬಂದಿ ಇದ್ದರೂ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಭದ್ರತೆಗೆ ನಿಯೋಜನೆ ಮಾಡಿದ್ದ ಪೊಲೀಸರ ಮೇಲೂ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಡಿಸಿಆರ್​ಬಿ ಪೊಲೀಸ್ ಪೇದೆ ರಘು ತಲೆಗೆ ಗಂಭೀರವಾದ ಗಾಯವಾಗಿದೆ.

Share Post