NationalPolitics

ಶಾಸಕರು, ಸಂಸದರಿದ್ದ ದೋಣಿ ಪಲ್ಟಿ!; ಮುಂದೇನಾಯ್ತು..?

ಪಶ್ಚಿಮ ಬಂಗಾಳ; ಶಾಸಕರು ಹಾಗೂ ಸಂಸದರಿದ್ದ ದೋಣಿ ಪಲ್ಟಿಯಾಗಿ ಅವಾಂತರ ಸೃಷ್ಟಿ ಮಾಡಿದೆ.. ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ವಿಪರೀತ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ.. ಈ ಹಿನ್ನೆಲೆಯಲ್ಲಿ ಪ್ರವಾಹ ಪೀಡೀತ ಸ್ಥಳಗಳಿಗೆ ಆಡಳಿತಾರೂಢ ಟಿಎಂಸಿ ಪಕ್ಷದ ಶಾಸಕರು ಹಾಗೂ ಸಂಸದರು ಭೇಟಿ ನೀಡಿದ್ದರು.. ಈ ವೇಳೆ ದೋಣಿಯಲ್ಲಿ ಹೋಗುವಾಗ ಅದು ಮಗುಚಿಬಿದ್ದಿದೆ..
ಬಿರ್‌ಬೂಮ್‌ ಜಿಲ್ಲೆಯ ಬಲರಾಮ್‌ಪುರ ಹಾಗೂ ಲ್ಯಾಬ್‌ಪುರದ ಪ್ರವಾಹ ಪ್ರದೇಶಗಳಿಗೆ ಶಾಸಕರ ತಂಡ ತೆರಳಿತ್ತು.. ಈ ವೇಳೆ ದೋಣಿ ಮಗುಚಿಬಿದ್ದಿದೆ.. ದೋಣಿಯಲ್ಲಿ ಟಿಎಂಸಿ ಶಾಸಕರು, ಸ್ಥಳೀಯ ಸಂಸದರು ಹಾಗೂ ಉನ್ನತ ಅಧಿಕಾರಿಗಳಿದ್ದರು.. ಒಟ್ಟು 13 ಮಂದಿ ದೋಣಿಯಲ್ಲಿ ಹೋಗುತ್ತಿದ್ದರು.. ಲಾಬ್‌ಪುರ್‌ ಶಾಸಕ ಅಭಿಜಿತ್‌ ಸಿಂಗ್‌, ಸಂಸದ ಅಸಿತ್‌ ಮಲ್‌, ಶಮೀರುಲ್‌ ಇಸ್ಲಾಂ, ಬಿರ್‌ಭೂಮ್‌ ಡಿಸಿ ಬಿಧನ್‌ ರಾಯ್‌ ಸೇರಿ 13 ಮಂದಿ ದೋಣಿಯಲ್ಲಿದ್ದರು ಎಂದು ತಿಳಿದುಬಂದಿದೆ..
ದೋಣಿ ಮಗುಚಿ ಬೀಳುತ್ತಿದ್ದಂತೆ ಸ್ಥಳೀಯರು ಅವರ ರಕ್ಷಣೆಗೆ ಧಾವಿಸಿದರು.. ದೋಣಿಯಲ್ಲಿ ಪ್ರಯಾಣ ಮಾಡುವ ವೇಳೆ ಸಂಸದರು, ಶಾಸಕರು ಮತ್ತು ಅಧಿಕಾರಿಗಳು ಸುರಕ್ಷತಾ ಜಾಕೆಟ್‌ ಧರಿಸಿರಲಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಆದ್ರೆ ಹತ್ತಿರದಲ್ಲೇ ಇದ್ದ ಜನ ನೀರಿಗೆ ಹಾರಿ ಅವರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ..

Share Post