HealthNational

ಎತ್ತರದ ವ್ಯಕ್ತಿಗಳಿಗೆ ಕ್ಯಾನ್ಸರ್‌ ಬರುವ ಅಪಾಯ ಹೆಚ್ಚು; ಅಧ್ಯಯನ

ಬೆಂಗಳೂರು; ಪ್ರಪಂಚದಾದ್ಯಂತ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.. ಭಾರತದಲ್ಲೇ 2023ರಲ್ಲಿ 1.4 ದಶಲಕ್ಷಕ್ಕೂ ಹೆಚ್ಚು ಮಂದಿ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ.. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್‌ ನಿಯಂತ್ರಣಕ್ಕಾಗಿ ವೈದ್ಯಲೋಕ ಸಾಕಷ್ಟು ಪ್ರಯತ್ನ ಮಾಡುತ್ತಿದೆ.. ಈ ಬಗ್ಗೆ ರೀಸರ್ಚ್‌ಗಳು ನಡೆಯುತ್ತಿವೆ.. ಮುಂಬರುವ ವರ್ಷಗಳಲ್ಲಿ ಹೆಚ್ಚು ಅಪಾಯವಿರುವುದರಿಂದ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.. ಸಂಶೋಧನೆಗಳ ವೇಳೆ ಒಂದು ಇಂಟ್ರೆಸ್ಟಿಂಗ್‌ ವಿಚಾರ ಬಯಲಾಗಿದೆ.. ಎತ್ತರದ ವ್ಯಕ್ತಿಗಳಲ್ಲಿ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಂಶೋಧನೆ ವೇಳೆ ಗೊತ್ತಾಗಿದೆ.. ವಿಶ್ವ ಕ್ಯಾನ್ಸರ್‌ ಸಂಶೋಧನಾ ನಿಧಿ ಈ ವರದಿ ನೀಡಿದೆ..
ಕ್ಯಾನ್ಸರ್‌ಗೂ ಮನುಷ್ಯನ ಎತ್ತರಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ.. ಎತ್ತರವಿರುವ ವ್ಯಕ್ತಿಗಳಿಗೆ ಬಹುಬೇಗ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ.. ಸಾಮಾನ್ಯ ಎತ್ತರದ ವ್ಯಕ್ತಿಗಳಿಗಿಂತ ಸ್ವಲ್ಪ ಹೆಚ್ಚು ಎತ್ತರವಿರುವವರೊಗೆ ಕರುಳು, ಗರ್ಭಾಶಯ (ಎಂಡೊಮೆಟ್ರಿಯಂ), ಅಂಡಾಶಯ, ಪ್ರಾಸ್ಟೇಟ್, ಮೂತ್ರಪಿಂಡ ಮತ್ತು ಸ್ತನ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ಹೇಳಿದೆ..
ವ್ಯಕ್ತಿ ಎಷ್ಟು ಎತ್ತರವಾಗಿದ್ದಾನೆ ಎಂಬುದರ ಮೇಲೆ ಕ್ಯಾನ್ಸರ್‌ ಅಪಾಯ ಗುರುತಿಸಬಹುದೆಂದು ಅಧ್ಯಯನ ಹೇಳಿದೆ.. ಉದ್ದದ ವ್ಯಕ್ತಿಗಳಿಗೆ ಕ್ಯಾನ್ಸರ್‌ ಅಪಾಯವು ಸುಮಾರು ಶೇ.16ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ಗೊತ್ತಾಗಿದೆ.. ಸಾಮಾನ್ಯ ಎತ್ತರವಿರುವ (ಸುಮಾರು 165 ಸೆಂಮೀ) ಪ್ರತಿ 10,000 ಮಹಿಳೆಯರಲ್ಲಿ ಸುಮಾರು 45 ಜನರು ಕ್ಯಾನ್ಸರ್ ಅಪಾಯದಲ್ಲಿದ್ದರು. ಜೊತೆಗೆ 175 ಸೆಂ. ಮೀ. ಎತ್ತರವಿರುವ ಮಹಿಳೆಯರಲ್ಲಿ, ಪ್ರತಿ 10,000 ಮಹಿಳೆಯರಲ್ಲಿ 52 ಜನ ಕ್ಯಾನ್ಸರ್ ಹೊಂದಿದ್ದರು ಎಂದು ಅಧ್ಯಯನದಿಂದ ಗೊತ್ತಾಗಿದೆ…

 

Share Post