CrimeNational

ತಂಗಿಗೆ 20 ರೂ. ಕೊಟ್ಟು 8 ವರ್ಷದ ಅಕ್ಕನ ಮೇಲೆ ಅತ್ಯಾಚಾರ..!

ಮಹಾರಾಷ್ಟ್ರ; ಐದು ವರ್ಷದ ಬಾಲಕಿಗೆ 20 ರೂಪಾಯಿ ಕೊಟ್ಟು ಸುಮ್ಮನಾಗಿಸಿ, ಆಕೆಯ 8 ವರ್ಷದ ಅಕ್ಕನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ.. ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಮಹಾರಾಷ್ಟ್ರದ ನಾಗ್ಪುರದ ಪಾರ್ಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.. ಆದ್ರೆ ಇದುವರೆಗೂ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ..
ಈ ಇಬ್ಬರು ಹೆಣ್ಣು ಮಕ್ಕಳ ಕುಟುಂಬ ಮೂರು ತಿಂಗಳ ಹಿಂದಷ್ಟೇ ನಾಗ್ಪುರಕ್ಕೆ ಬಂದು ನೆಲೆಸಿತ್ತು.. ಮಕ್ಕಳ ಪೋಷಕರು ಬೇರೆ ಕಡೆ ಕೂಲಿ ಕೆಲಸಕ್ಕೆ ಹೋಗುತ್ತಾರೆ.. ಹೀಗಾಗಿ ಹಗಲಿನಲ್ಲಿ ಹೆಣ್ಣು ಮಕ್ಕಳಿಬ್ಬರು ಮಾತ್ರವೇ ಮನೆಯಲ್ಲಿರುತ್ತಾರೆ.. ಇದನ್ನೇ ಕಾಯುತ್ತಿದ್ದ ಕಾಮುಕನೊಬ್ಬ ಪೋಷಕರನ್ನು ಕೇಳುವ ನೆಪದಲ್ಲಿ ಮನೆ ಪ್ರವೇಶ ಮಾಡಿದ್ದಾನೆ.. ಮನೆಯಲ್ಲಿ 5 ವರ್ಷ ಹಾಗೂ 8 ವರ್ಷ ಮಕ್ಕಳು ಮಾತ್ರ ಇದ್ದಿದ್ದು ನೋಡಿದ್ದಾನೆ.. ಇದನ್ನು ಗಮನಿಸುತ್ತಿದ್ದಂತೆ ದೊಡ್ಡ ಹುಡುಗಿ ಮೇಲೆ ಕಾಮುಕ ಎರಗಿದ್ದಾನೆ.. ಚಿಕ್ಕ ಮಗು ಗಲಾಟೆ ಮಾಡುತ್ತಿದ್ದರೆ, ಗಲಾಟೆ ಮಾಡಬೇಡ ಎಂದು ಆಕೆಗೆ 20 ರೂಪಾಯಿ ಕೊಟ್ಟಿದ್ದಾರೆ.. ನಂತರ ದೊಡ್ಡ ಹುಡುಗಿ ಮೇಲೆ ಅತ್ಯಾಚಾರ ಎಸಗಿ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ..
ಬಾಲಕಿಯ ಪೋಷಕರು ಸಂಜೆ ಮನೆಗೆ ಬಂದಾಗ ನಡೆದ ಘಟನೆಯನ್ನು ಇಬ್ಬರೂ ಬಾಲಕಿಯರೂ ಹೇಳಿದ್ದಾರೆ.. ಕೂಡಲೇ ಪೋಷಕರು ಪಾರ್ಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.. ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.. ಬಾಲಕಿಯ ಉಡುಪುಗಳ ಮೇಲೆ ರಕ್ತದ ಕಲೆಗಳು ಕೂಡಾ ಪತ್ತೆಯಾಗಿವೆ.. 5 ವರ್ಷದ ಬಾಲಕಿ ನೀಡಿದ ಮಾಹಿತಿ ಮೇರೆಗೆ ವ್ಯಕ್ತಿ ಚಹರೆಗಳನ್ನಿಟ್ಟುಕೊಂಡು ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

Share Post