DistrictsHealth

ಸಂಬಂಧಿಗೆ ಅಂಗಾಂಗ ದಾನ ಮಾಡಿದ್ದ ಅರ್ಚನಾ ಕಾಮತ್‌ ಸಾವು!

ಮಂಗಳೂರು; ಕಾಯಿಲೆ ಪೀಡಿತ ಸಂಬಂಧಿಯೊಬ್ಬರಿಗೆ ಅಂಗಾಂಗ ದಾನ ಮಾಡಿದ್ದ ಉಪನ್ಯಾಸಕಿಯೊಬ್ಬರು ಇನ್ಫೆಕ್ಷನ್‌ ಆಗಿ ಸಾವನ್ನಪ್ಪಿದ್ದಾರೆ.. ಮಂಗಳೂರಿನ ಖ್ಯಾತ ಲೆಕ್ಕಪರಿಶೋಧಕ ಚೇತನ್ ಕಾಮತ್‌ ಅವರ ಪತ್ನಿ ಹಾಗೂ ಉಪನ್ಯಾಸಕಿ ಅರ್ಚನಾ ಕಾಮತ್‌ ಅವರೇ ಸಾವನ್ನಪ್ಪಿದವರು.. ಲಿವರ್‌ ದಾನ ಮಾಡಿದ್ದ ಅರ್ಚನಾ ಕಾಮತ್‌ ಗೆ ಕೆಲದಿನಗಳ ನಂತರ ಆರೋಗ್ಯದಲ್ಲಿ ಏರುಪೇರಾಗಿದೆ.. ಅದು ವಿಪರೀತವಾಗಿ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ..
ಅರ್ಚನಾ ಕಾಮತ್‌ ಅವರ ಪತಿ ಚೇತನ್‌ ಕಾಮತ್‌ ಅವರ ತಂದೆಯ ಸಹೋದರನ ಪತ್ನಿಗೆ ಲಿವರ್‌ ಸಮಸ್ಯೆ ಇತ್ತು.. ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಲಿವರ್‌ ಕಸಿ ಮಾಡಬೇಕೆಂದು ವೈದ್ಯರು ಹೇಳಿದ್ದರು.. ಹಲವಾರು ಡೋನರ್‌ಗಳನ್ನು ಹುಡುಕಲಾಗಿತ್ತು.. ಆದ್ರೆ ಅದು ಮ್ಯಾಚ್‌ ಆಗಿರಲಿಲ್ಲ.. ಆದ್ರೆ ಅರ್ಚನಾ ಕಾಮತ್‌ ಅವರ ಲಿವರ್‌ ಮ್ಯಾಚ್‌ ಆಗಿತ್ತು.. ಹೀಗಾಗಿ, ಅರ್ಚನಾ ಅವರು ಲಿವರ್‌ ಡೊನೇಟ್‌ ಮಾಡಲು ತೀರ್ಮಾನ ಮಾಡಿದ್ದರು.. 12 ದಿನಗಳ ಹಿಂದೆ ಲಿವರ್‌ ಟ್ರಾನ್ಸ್‌ಪ್ಲಾಂಟ್‌ ಯಶಸ್ವಿಯಾಗಿತ್ತು..
ಅರ್ಚನಾ ಅವರು ಕೂಡಾ ಚೇತರಿಸಿಕೊಂಡು ಮೂರು ದಿನಗಳ ಹಿಂದಷ್ಟೇ ಮನೆಗೆ ಮರಳಿದ್ದರು.. ಆದ್ರೆ ಇದ್ದಕ್ಕಿದ್ದಂತೆ ಇನ್ಫೆಕ್ಷನ್‌ ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದರು.. ಬಹುಅಂಗಾಂಗ ವೈಫಲ್ಯವಾಗಿ ಅವರು ಸಾವನ್ನಪ್ಪಿದ್ದಾರೆ..

 

Share Post