ವಿಶ್ವಸುಂದರಿ ಆಯ್ಕೆಗೆ ಕೊವಿಡ್ ಅಡ್ಡಿ;ಭಾರತದ ಮಾನಸ ಆಗ್ತಾರಾ ಮಿಸ್ ವರ್ಲ್ಡ್..?
ಸ್ಯಾನ್ ಜುವಾನ್: ವಿಶ್ವಸುಂದರಿ -2021ರ ಫೈನಲ್ ಸ್ಪರ್ಧೆಯನ್ನು ಕೊರೊನಾ ಕಾರಣದಿಂದಾಗಿ ಮುಂದೂಡಲಾಗಿದೆ. ವಿಶ್ವಸುಂದರಿ ಸ್ಪರ್ಧೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಹಾಗೂ ಸ್ಪರ್ಧಾಳುಗಳಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸ್ಪರ್ಧೆಯನ್ನು ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಭಾರತದಿಂದ ಮಾನಸ ವಾರಾಣಸಿ ಫೈನಲ್ ಪ್ರವೇಶಿಸಿದ್ದರು. ಇದೀಗ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ತೆಲಂಗಾಣ ಮೂಲದವರಾದ ಮಾನಸ ವಾರಾಣಸಿ, ಈಗ ಕ್ವಾರಂಟೀನ್‌ನಲ್ಲಿದ್ದಾರೆ. ಗುರುವಾರ ಫೈನಲ್ ಸ್ಪರ್ಧೆ ನಡೆಯಬೇಕಿತ್ತು. ಮಾನಸ ವಿಶ್ವ ಸುಂದರಿ ಕಿರೀಟ ಧರಿಸುತ್ತಾರೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದರು. ಆದರೆ, ಕೊರೊನಾದಿಂದಾಗಿ ಸ್ಪರ್ಧೆ ಮುಂದೂಡಲಾಗಿದೆ.
90 ದಿನಗಳ ಒಳಗಾಗಿ ಸ್ಪರ್ಧೆ ಆಯೋಜನೆ ಮಾಡುತ್ತೇವೆ ಎಂದು ಆಯೋಜಕರು ಹೇಳಿದ್ದಾರೆ. ಅಂದಹಾಗೆ ಭಾರತದಿಂದ ಫೈನಲ್ ಪ್ರವೇಶಿಸಿರುವ ಮಾನಸ ವಾರಾಣಸಿಗೆ 24 ವರ್ಷದ ವಯಸ್ಸಾಗಿದೆ. ಇವರು 2020ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ವಿಜೇತರಾಗಿದ್ದಾರೆ. ಮಾನಸ ಅವರು ಹೈದರಾಬಾದ್‌ನ ವಾಸವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿದ್ದಾರೆ.