BengaluruCrime

ಆಡಿಯೋ ನನ್ನದೇ ಎಂದು ಸಾಬೀತು ಮಾಡದರೆ ರಾಜೀನಾಮೆ; ಶಾಸಕ ಮುನಿರತ್ನ

ಬೆಂಗಳೂರು; ಬಿಬಿಎಂಪಿ ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಎರಡು ಎಫ್‌ಐಆರ್‌ ದಾಖಲಾಗಿದೆ.. ಪೊಲೀಸರು ಅವರ ಬಂಧನಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ.. ಈ ನಡುವೆಯೇ ಶಾಸಕ ಮುನಿರತ್ನ ಅವರು, ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ.. ಗುತ್ತಿಗೆದಾರ ಚಲುವರಾಜು ಬಿಡುಗಡೆ ಮಾಡಿರುವ ಆಡಿಯೋ ನನ್ನದು ಎಂದು ಸಾಬೀತು ಮಾಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ..
ಆಡಿಯೋ ತೆಗೆದುಕೊಂಡು ಸ್ಪೀಕರ್‌ ಕಚೇರಿಗೆ ಬರಲಿ. ಅದು ನನ್ನದೆ ಎಂದು ಸಾಬೀತು ಮಾಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಮುನಿರತ್ನ ಹೇಳಿದ್ದಾರೆ.. 2 ಸಮುದಾಯ ಸೇರಿ ನನ್ನನ್ನು ಮುಹಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ.. ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ..

Share Post