BengaluruCrime

ಪಬ್ಲಿಕ್‌ನಲ್ಲೇ ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಮಹಿಳೆಗೆ ಬೆದರಿಕೆ!

ಬೆಂಗಳೂರು; ನಡುಬೀದಿಯಲ್ಲೇ ಯುವಕನೊಬ್ಬ ಮಹಿಳೆಯೊಬ್ಬರಿಗೆ ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.. ಬೆಂಗಳೂರಿನ ಕತ್ರಿಗುಪ್ಪೆ ರಸ್ತೆಯಲ್ಲಿ ಈ ಘಟನೆ ನಡೆದಿದೆ.. ಈ ಬಗ್ಗೆ ಮಹಿಳೆಯೊಬ್ಬಳು ರೆಡ್ಡಿಟ್‌ನಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದಾಳೆ.. ಆಟೋಗೆ ಹಾರ್ನ್‌ ಮಾಡಿದ್ದಕ್ಕೆ ಸಿಗ್ನಲ್‌ನಲ್ಲಿ ನಮ್ಮ ಕಾರು ನಿಂತಿದ್ದಾಗ ಅಲ್ಲಿಗೆ ಬಂದ ಯುವಕ ಕೆಟ್ಟ ಮಾತುಗಳಲ್ಲಿ ಬೈದು ನಿಂದಿಸಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾಳೆ..
ಆಟೋ ಚಾಲಕನೊಬ್ಬ ಹುಚ್ಚನಂತೆ ಆಟೋ ಓಡಿಸುತ್ತಿದ್ದ.. ಈ ವೇಳೆ ಆತ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದ.. ಆದರೂ ಕೂಡಾ ಆತನ ಜೊತೆ ನಮಗೇಕೆ ಎಂದು ನಾನು ಮುಂದಕ್ಕೆ ಹೋದೆ.. ಆದ್ರೆ ಸಿಗ್ನಲ್‌ನಲ್ಲಿ ನಿಂತಿದ್ದಾಗ ಯುವಕನೊಬ್ಬ ಬಂದು ಗಲಾಟೆ ಮಾಡಿದ.. ಕಾರಿನ ಗಾಜು ಒಡೆಯಲು ಯತ್ನಿಸಿದ, ಡೋರ್‌ ತೆಗೆಯುವಂತೆ ಬೆದರಿಕೆ ಒಡ್ಡಿದ. ಈ ವೇಳೆ ಅವಾಚ್ಯ ಶಬ್ದಗಳಿಂದ ಬೈದ.. ನಾನು ವಿಡಿಯೋ ಮಾಡುತ್ತಿರುವುದು ನೋಡಿ ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಮಹಿಳೆ ರೆಡ್ಡಿಟ್‌ನಲ್ಲಿ ಗೋಳು ತೋಡಿಕೊಂಡಿದ್ದಾಳೆ..
ಕಾರಿನಲ್ಲಿ ನನ್ನ ತಾಯಿ ಸೇರಿ ಇಡೀ ಕುಟುಂಬ ಇತ್ತು.. ಈ ವೇಳೆಯೇ ಆತ ಈ ರೀತಿಯ ಮಾತುಗಳನ್ನಾಡಿದ್ದಾನೆ.. ನೀವೆಲ್ಲಾ ವೇಶ್ಯೆಯರು ಎಂದು ಜರಿದಿದ್ದಾನೆ.. ನನಗೆ ಕನ್ನಡ ಬರುವುದಿಲ್ಲವೆಂದು ಅಂದುಕೊಂಡು ಆತ ಕೆಟ್ಟ ಮಾತುಗಳಲ್ಲೆಲ್ಲಾ ಬೈದಿದ್ದಾನೆ.. ಈ ಸಂದರ್ಭದಲ್ಲಿ ತುಂಬಾ ಜನ ನೋಡುತ್ತಿದ್ದರು.. ಆದ್ರೆ ಯಾರೂ ಕೂಡಾ ನಮ್ಮ ಸಹಾಯಕ್ಕೆ ಬಂದಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ..

Share Post