BengaluruNational

ಟೆರೇಸ್‌ ಮೇಲೆ ಡ್ಯಾನ್ಸ್‌!; ರೀಲ್ಸ್‌ ಮಾಡುತ್ತಾ ಮುಗ್ಗರಿಸಿ ಬಿದ್ದ ಯುವತಿ!

ಬೆಂಗಳೂರು; ರೀಲ್ಸ್‌ ಹುಚ್ಚು ಹಿಡಿಸಿಕೊಂಡವರು ಮಾಡುವ ಕೆಲಸಗಳು ಒಂದೊಂದಲ್ಲ.. ದಿನವೂ ಒಂದಿಲ್ಲೊಂದು ಅವಾಂತರಗಳು ನಡೆಯುತ್ತಿರುತ್ತವೆ.. ಎಡವಟ್ಟುಗಳು ಮಾಡಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗುತ್ತಿರುತ್ತಾರೆ.. ಅದೇ ರೀತಿ ಇಲ್ಲೊಬ್ಬ ಯುವತಿ ಮನೆಯ ಟೆರೇಸ್‌ ಮೇಲೆ ಡ್ಯಾನ್ಸ್‌ ಮಾಡುತ್ತಾ ರೀಲ್ಸ್‌ ಮಾಡುತ್ತಿದ್ದಳು.. ಈ ವೇಳೆ ಇದ್ದಕ್ಕಿದ್ದಂತೆ ಮುಗ್ಗರಿಸಿ ಬಿದ್ದಿದ್ದಾಳೆ.. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ..
ಮನೆಯ ಟೆರೇಸ್‌ ಮೇಲೆ ಹತ್ತಿದ ಯುವತಿ ವೆದರ್‌ ಎಷ್ಟು ಚೆನ್ನಾಗಿದೆ ಅಲ್ವಾ ಎಂದು ಹೇಳುತ್ತಾ ಡ್ಯಾನ್ಸ್‌ ಮಾಡಲು ಶುರು ಮಾಡಿದ್ದಾಳೆ.. ಈ ವೇಳೆ ಆಕೆ ಮುಗ್ಗರಿಸಿಬಿದ್ದಿದ್ದಾಳೆ.. ಈ ಫನ್ನಿ ವಿಡಿಯೋವನ್ನು ಹಕೀಮ್‌ ಖಾನ್‌ (hakeen.khan86) ಎಂಬುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..

Share Post