ಎಲ್.ಆರ್.ಶಿವರಾಮೇಗೌಡ ವಿರುದ್ಧ ಭೂಕಬಳಿಕೆ ಆರೋಪ
ಬೆಂಗಳೂರು; ರಾಜಕಾರಣಿ ಹಾಗೂ ಉದ್ಯಮಿ ಎಲ್.ಆರ್.ಶಿವರಾಮೇಗೌಡ ಅವರು ಆನೇಕಲ್‌ನ ತಿಮ್ಮಯ್ಯ ಚಾರಿಟೀಸ್ ಟ್ರಸ್ಟ್‌ನ ಕಟ್ಟಡ ಕಬಳಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.. ಈ ಹಿನ್ನೆಲೆಯಲ್ಲಿ ಇಂದು ಬಲಿಜ ಸಂಘದಿಂದ ಎಲ್.ಆರ್.ಶಿವರಾಮೇಗೌಡ ವಿರುದ್ಧ ಹೋರಾಟ ನಡೆಸಲಾಯಿತು. ಟ್ರಸ್ಟ್‌ನ ಕಟ್ಟಡವನ್ನು ಶಾಲೆ ನಡೆಸಲು ಲೀಸ್‌ಗೆ ಪಡೆದಿದ್ದ ಶಿವರಾಮೇಗೌಡ ಅವರು ಆ ಕಟ್ಟಡವನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ..
ಬೆಂಗಳೂರಿನ ಚಾಮರಾಜಪೇಟೆಯ 1ನೇ ಮುಖ್ಯ ರಸ್ತೆಯಲ್ಲಿ ಟ್ರಸ್ಟ್‌ನ ಕಟ್ಟಡವಿದೆ.. 60 ಸಾವಿರ ಚದರಡಿ ಜಾಗದಲ್ಲಿ ಆನೇಕಲ್ ತಿಮ್ಮಯ್ಯ ಚಾರಿಟಿಸ್ ಟ್ರಸ್ಟ್ ಕಟ್ಟಡ ಇದೆ.. ಇದರಲ್ಲಿ ರಾಯಲ್ ಕಾನ್‌ಕಾರ್ಡ್ ಶಾಲೆ ನಡೆಸಲು ಎಲ್.ಆರ್.ಶಿವರಾಮೇಗೌಡ ಅವರು 2017ರಲ್ಲಿ ತಿಂಗಳಿಗೆ 20ಲಕ್ಷ ರೂಪಾಯಿ ನೀಡುವ ಕರಾರಿನಂತೆ ಲೀಸ್‌ಗೆ ಪಡೆದಿದ್ದರು.. ಆದ್ರೆ ಇದುವರೆಗೂ ಬಾಡಿಗೆ ಪಾವತಿಯೇ ಮಾಡಿಲ್ಲವಂತೆ. ಸುಮಾರು 17 ಕೋಟಿ ರೂಪಾಯಿ ಬಾಡಿಗೆ ವಂಚನೆ ಮಾಡಿದ್ದಾರೆ ಎಂದು ಬಲಿಜ ಸಂಘದ ಸದಸ್ಯರು ಆರೋಪ ಮಾಡಿದ್ದಾರೆ..
ಸಂಘದ ಈ ಹಿಂದಿನ ಪದಾಧಿಕಾರಿಗಳ ನಕಲಿ ಸಹಿ ಬಳಸಿ ಕಟ್ಟಡದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ.. ಜೊತೆಗೆ ಸಂಘದ ಜಾಗದಲ್ಲಿ 20,932 ಚದರ ಅಡಿ ಜಾಗವನ್ನು ಬೋಗಸ್ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.. ಕೂಡಲೇ ಕಟ್ಟಡ ಖಾಲಿ ಮಾಡುವಂತೆ ಬಲಿಜ ಸಂಘದ ಸದಸ್ಯರು ಆಗ್ರಹ ಮಾಡುತ್ತಿದ್ದಾರೆ..