ಹೆದ್ದಾರಿಯಲ್ಲಿ ಮಹಿಳೆಯ ರುಂಡವಿಲ್ಲದ ಬೆತ್ತಲೆ ದೇಹ ಪತ್ತೆ!
ನವದೆಹಲಿ; ಮಹಿಳೆಯನ್ನು ಕೊಲೆ ಮಾಡಿ ಆಕೆಯ ತಲೆ ಕತ್ತರಿಸಿ, ತಲೆ ಇಲ್ಲದ ಬೆತ್ತಲೆ ದೇಹವನ್ನು ರಸ್ತೆಯಲ್ಲೇ ಬಿಸಾಡಿ ಹೋಗಿದ್ದಾರೆ.. ಉತ್ತರ ಪ್ರದೇಶದ ಕಾನ್ಪುರದ ಗುಜೈನಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರುಂಡವಿಲ್ಲದ ಮಹಿಳೆಯ ಬೆತ್ತಲೆ ಮೃತದೇಹ ಸಿಕ್ಕಿದೆ.. ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ..
ಮಹಿಳೆಯ ರುಂಡ ಸಿಕ್ಕಿಲ್ಲ.. ಹೀಗಾಗಿ ಸಿಕ್ಕ ದೇಹ ಯಾರದೆಂದು ಇನ್ನೂ ಗೊತ್ತಾಗಿಲ್ಲ.. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.. ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.. ಇನ್ನು ಪೊಲೀಸರು ದೇಹ ಸಿಕ್ಕ ಪ್ರದೇಶದ ಸುತ್ತಮುತ್ತ ಅಳವಡಿಸಿರುವ ಸಿಸಿವಿಟಿ ದೃಶ್ಯಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದ್ದಾರೆ.. ಆಸ್ಪತ್ರೆಯೊಂದರ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವಂತೆ ಮೃತ ಮಹಿಳೆಯಂತೆಯೇ ಕಾಣುವ ಮಹಿಳೆಯೊಬ್ಬರು ಘಟನೆಗೂ ಒಂದು ಗಂಟೆ ಮೊದಲು ನಡೆದುಕೊಂಡು ಹೋಗುವ ದೃಶ್ಯ ಸಿಕ್ಕಿದೆ.. ಆಕೆಯೇ ಕೊಲೆಯಾದ ಮಹಿಳೆಯಾಗಿರಬಹುದು ಎಂದು ಶಂಕಿಸಲಾಗಿದೆ..
ಇನ್ನು ಸಿಸಿಟಿವಿಯಲ್ಲಿ ಸೆರೆಯಾದ ಮಹಿಳೆ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಳು.. ಇನ್ನು ಮೃತದೇಹ ಸಿಕ್ಕ ಜಾಗದಲಲ್ಲಿ ಕೂಡಾ ಬೂದು ಬಣ್ಣದ ಬಟ್ಟೆಯ ತುಣುಕುಗಳು ಸಿಕ್ಕಿವೆ..