ಪ್ರಿಯಕರನ ಜೊತೆ ಸೇರಿ ಸಬ್‌ಇನ್ಸ್‌ಪೆಕ್ಟರ್ ಕೊಲೆ ಮಾಡಿದ ಮಹಿಳಾ ಪೇದೆ!
ಭೋಪಾಲ್; ಮಹಿಳಾ ಪೊಲೀಸ್ ಪೇದೆಯೊಬ್ಬರು ತನ್ನ ಪ್ರಿಯಕರ ಜೊತೆಗೂಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಕೊಲೆ ಮಾಡಿದ್ದಾಳೆ.. ಮಧ್ಯಪ್ರದೇಶದ ರಾಜಗಢ ಜಿಲ್ಲೆ ಬಯೋರಾದಲ್ಲಿ ಈ ಘಟನೆ ನಡೆದಿದೆ.. ಸಬ್ ಇನ್ಸ್ ಪೆಕ್ಟೆರ್ ದೀಪಂಕರ್ ಗೌತಮ್ ಎಂಬುವವರೇ ಕೊಲೆಯಾದವರಾಗಿದ್ದಾರೆ.. ಮಹಿಳಾ ಪೊಲೀಸ್ ಪೇದೆ ಪಲ್ಲವಿ ಸೋಲಂಕಿ ಹಾಗೂ ಆಕೆಯ ಪ್ರಿಯಕರ ಕರಣ್ ಠಾಕೂರ್ ಎಂಬುವವರೇ ಕೊಲೆಗಡುಕರು.. ಪೊಲೀಸರು ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..
ಪಲ್ಲವಿ ಸೋಲಂಕಿ ಅವರು ರಾಜಗಢ ಜಿಲ್ಲೆಯಲ್ಲಿ ಮಹಿಳಾ ಪೇದೆಯಾಗಿ ಕೆಲಸ ಮಾಡುತ್ತಾರೆ.. ಈಕೆ ಕರಣ್ ಠಾಕೂರ್‌ನನ್ನು ಪ್ರೀತಿ ಮಾಡುತ್ತಿದ್ದಳು.. ಆದ್ರೆ ಕೆಲ ದಿನಗಳ ನಂತರ ಇವರಿಬ್ಬರ ನಡುವೆ ಬ್ರೇಕಪ್ ಆಗಿತ್ತು.. ಅದಾದ ಮೇಲೆ ತಮ್ಮದೇ ಠಾಣೆಯ ಎಸ್‌ಐ ದೀಪಂಕರ್ ಗೌತಮ್ ಜೊತೆ ಪಲ್ಲವಿ ಸೋಲಂಕಿ ಸಲುಗೆ ಬೆಳೆಸಿದ್ದಳು.. ಇಬ್ಬರ ನಡುವೆ ಮದುವೆಯೇತರ ಸಂಬಂಧ ಬೆಳೆದಿತ್ತು.. ಈ ನಡುವೆ ಮತ್ತೆ ಕರಣ್ ಠಾಕೂರ್ ಮಹಿಳಾ ಪೇದೆ ಪಲ್ಲವಿ ಸೋಲಂಕಿ ಸಂಪರ್ಕ ಬೆಳೆಸಿದ್ದ.. ಇದೇ ವೇಳೆ ಆತನಿಗೆ ತನ್ನ ಪ್ರಿಯತಮೆ ಎಸ್‌ಐ ದೀಪಂಕರ್ ಜೊತೆ ಸಲುಗೆಯಿಂದ ಇದ್ದಿದ್ದು ಗೊತ್ತಾಗಿದೆ.. ಆತನ ಜೊತೆ ಸಂಪರ್ಕ ಕಡಿದುಕೋ ಎಂದು ಪ್ರಿಯಕರ ಹೇಳಿದ್ದಾನೆ.. ನಂತರ ಅದೇನಾಯ್ತೋ ಏನೋ ಇಬ್ಬರೂ ಎಸ್‌ಐ ದೀಪಂಕರ್ ಕೊಲೆಗೆ ಸ್ಕೆಚ್ ರೂಪಿಸಿದ್ದಾರೆ..
ಮನೆಯಲ್ಲಿದ್ದ ಎಸ್‌ಐ ದೀಪಂಕರ್‌ಗೆ ಕರೆ ಮಾಡಿದ್ದ ಪಲ್ಲವಿ ಭೋಪಾಲ್ ಬೈಪಾಸ್ ರಸ್ತೆಗೆ ಬರುವಂತೆ ಹೇಳಿದ್ದಳು.. ಅದರಂತೆ ಬೈಕ್‌ನಲ್ಲಿ ಅವರು ಬಯೋರಾ-ದೇವಾಸ್ ಹೆದ್ದಾರಿಯಲ್ಲಿ ದೇಹತ್ ಪೊಲೀಸ್ ಠಾಣೆ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು.. ಈ ವೇಳೆ ಕಾರಿನಲ್ಲಿ ಬಂದ ಕರಣ್ ಮತ್ತು ಪಲ್ಲವಿ ಡಿಕ್ಕಿ ಹೊಡೆಸಿದ್ದಾರೆ.. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದರೂ 30 ಮೀಟರ್ ಎಳೆದೊಯ್ದಿದ್ದಾರೆ.. ನಂತರ ಸ್ಥಳೀಯರು ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದ್ರೆ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದರು..