ಟೆಲಿಗ್ರಾಂ ಸಂಸ್ಥಾಪಕ 100ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಂತೆ!
ಬೆಂಗಳೂರು; ನಾನು 100ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿದ್ದೇನೆ ಎಂದು ಟೆಲಿಗ್ರಾಂ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ ಹೇಳಿಕೊಂಡಿದ್ದಾರೆ.. ಈ ಬಗ್ಗೆ ಅವರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.. 15 ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ವೀರ್ಯ ದಾನಕ್ಕಾಗಿ ನನ್ನ ಸಂಪರ್ಕ ಮಾಡಿದ್ದರು. ಅದಾದ ನಂತರ ಕ್ಲಿನಿಕ್ ನಿರ್ದೇಶಕರು ಉತ್ತಮ ಗುಣಮಟ್ಟದ ವೀರ್ಯ ದಾನಿಗಳ ಕೊರತೆ ಇದ್ದು, ದಾನ ಮುಂದುವರೆಸುವಂತೆ ಹೇಳಿದ್ದರು. ಹೀಗಾಗಿ ನಾನು 100ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ..
ಸದ್ಯಕ್ಕೆ ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಫ್ರಾನ್ಸ್‌ನಲ್ಲಿ ಬಂಧನಕ್ಕೊಳಗಾಗಿದ್ದಾರೆ. ಟೆಲಿಗ್ರಾಮ್ ಮೂಲಕ ಹಲವು ಕಾನೂನು ಬಾಹಿರ ಕೆಲಸಗಳು ನಡೆಯುತ್ತಿವೆ ಅನ್ನೋ ಕಾರಣಕ್ಕೆ ಅವರನ್ನು ಬಂಧನಕ್ಕೊಳಪಡಿಸಲಾಗಿದೆ. ಅವರು ಈಗ ಈ ವಿಚಾರ ಬಹಿರಂಗ ಮಾಡಿದ್ದಾರೆ. ಈಗ ನನ್ನ ಡಿಎನ್‌ಎಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು ಉದ್ದೇಶಿಸಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದಾರೆ..