CrimeNational

ಟ್ರೈನಿ ಸೇನಾಧಿಕಾರಿಯೊಬ್ಬರ ಸ್ನೇಹಿತೆ ಮೇಲೆ ಗ್ಯಾಂಗ್‌ ರೇಪ್‌!

ಇಂಧೋರ್‌; ಸ್ನೇಹಿತೆಯರ ಜೊತೆಗೆ ಇಬ್ಬರು ತರಬೇತಿ ಸೇನಾಧಿಕಾರಿಗಳು ಪಿಕ್‌ನಿಕ್‌ಗೆ ಬಂದಿದ್ದಾಗ, ದಾಳಿ ನಡೆಸಿರುವ ದುಷ್ಕರ್ಮಿಗಳು, ಓರ್ವ ಸ್ನೇಹಿತೆ ಮೇಲೆ ಅತ್ಯಾಚಾರ ಎಸಗಿದ್ದಾರೆ.. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಕೃತ್ಯ ಎಸಗಲಾಗಿದೆ.. ಇಂಧೋರ್‌ನ ಮೊವ್ ಕಂಟೋನ್ಮೆಂಟ್‌ನಲ್ಲಿರುವ ಆರ್ಮಿ ವಾರ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಇಬ್ಬರು ಮೇಜರ್‌ ಶ್ರೇಣಿಯ ಅಧಿಕಾರಿಗಳು, ಜಾಮ್‌ನಗರ್‌ ಗೇಟ್‌ ಪ್ರದೇಶದಲ್ಲಿ ಪಿಕ್‌ನಿಕ್‌ಗೆಂದು ತೆರಳಿದ್ದರು.. ಅವರ ಜೊತೆ ಅವರ ಸ್ನೇಹಿತೆಯರೂ ಇದ್ದರು.. ಈ ವೇಳೆ ಈ ದಾಳಿ ನಡೆದಿದೆ..
ತರಬೇತಿ ಪಡೆಯುತ್ತಿರುವ ಇಬ್ಬರು ಸೇನಾಧಿಕಾರಿಗಳು ಇಬ್ಬರು ಸ್ನೇಹಿತೆಯರ ಜೊತೆ ಎಂಜಾಯ್‌ ಮಾಡುತ್ತಿದ್ದಾಗ ಹತ್ತು ಮಂದಿ ಶಸ್ತ್ರಸಜ್ಜಿತರು ದಾಳಿ ಮಾಡಿದ್ದಾರೆ.. ಅವರೆಲ್ಲಾ ಪಿಸ್ತೂಲ್‌, ಚಾಕುಗಳನ್ನು ತೋರಿಸಿ ಇವರನ್ನು ಬೆದರಿಸಿದ್ದಾರೆ.. ನಾಲ್ಕೂ ಮಂದಿಯನ್ನು ಚೆನ್ನಾಗಿ ಥಳಿಸಿದ್ದಾರೆ.. ಇದೇ ವೇಳೆ ಓರ್ವ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.. ಅನಂತರ ಅವರ ಬಳಿ ಇದ್ದ ಚಿನ್ನಾಭರಣ ಸೇರಿ ಕೆಲ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ..
ಓರ್ವ ಯುವತಿಯನ್ನು ಒತ್ತೆಯಾಳಾಗಿರಿಸಿಕೊಂಡು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.. ಇದೇ ವೇಳೆಗೆ ಅಲ್ಲಿಗೆ ಪೊಲೀಸರು ಆಗಮಿಸಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.. ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರಿಂದ ಆಕೆ ನಿತ್ರಾಣಗೊಂಡಿದ್ದಳು.. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. ಉಳಿದವರ ಮೈಮೇಲೂ ಗಾಯಗಳಾಗಿವೆ.. ಆರೋಪಿಗಳ ಬಂಧನಕ್ಕೆ ಹತ್ತು ಪೊಲೀಸ್‌ ತಂಡಗಳನ್ನು ರಚನೆ ಮಾಡಲಾಗಿದ್ದು, ಹುಡುಕಾಟ ತೀವ್ರಗೊಳಿಸಲಾಗಿದೆ..

 

Share Post