LifestylePolitics

ಈ ಕಾಂಗ್ರೆಸ್‌ ಸಂಸದೆಯನ್ನು ಮದುವೆಯಾಗ್ತಾರಾ ರಾಹುಲ್‌ ಗಾಂಧಿ..?

ನವದೆಹಲಿ; ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮದುವೆಯಾಗುತ್ತಿದ್ದಾರಾ..? ಇಂತಹದ್ದೊಂದು ಸುದ್ದಿ ಈಗ ಭಾರೀ ಸದ್ದು ಮಾಡುತ್ತಿದೆ.. ರಾಹುಲ್‌ ಗಾಂಧಿಗೆ ಈಗ 54 ವರ್ಷ ವಯಸ್ಸು.. ಈ ವಯಸ್ಸಿನಲ್ಲಿ ಅವರು ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.. ಅದೂ ಕೂಡಾ ಕಾಂಗ್ರೆಸ್‌ ಸಂಸದೆ ಪ್ರಣಿತಿ ಶಿಂಧೆ ಅವರನ್ನು ರಾಹುಲ್‌ ಗಾಂಧಿ ವರಿಸಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗುತ್ತಿವೆ.. ಈ ವರ್ಷದ ಕೊನೆಯಲ್ಲಿ ರಾಹುಲ್‌ ಗಾಂಧಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.. ಆದ್ರೆ ಈ ಬಗ್ಗೆ ಯಾರೂ ಕೂಢಾ ಅಧಿಕೃತವಾಗಿ ಮಾತನಾಡಿಲ್ಲ..
ಮಹಾರಾಷ್ಟ್ರದ ಸುಶೀಲ್‌ ಕುಮಾರ್‌ ಶಿಂಧೆ ಅವರ ಪುತ್ರಿ ಪ್ರಣಿತಿ ಶಿಂಧೆ ಹಾಲಿ ಸೋಲಾಪುರ ಸಿಟಿ ಸೆಂಟ್ರಲ್‌ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿದ್ದು, ಇದೇ ಮೊದಲ ಬಾರಿಗೆ ಸಂಸತ್‌ ಪ್ರವೇಶ ಮಾಡಿದ್ದಾರೆ.. ಭಾರತ್‌ ಜೋಡೋ ಸಂದರ್ಭದಲ್ಲಿ ರಾಹಯಲ್‌ ಗಾಂಧಿ ಮಹಾರಾಷ್ಟ್ರ ಪ್ರವೇಶಿಸಿದಾಗ ಮೊದಲ ಬಾರಿಗೆ ಪ್ರಣಿತಿ ಭೇಟಿಯಾಗಿತ್ತು ಎಂದು ಹೇಳಲಾಗಿದೆ.. ರಾಹುಲ್‌ ಗಾಂಧಿಯವರು ಮೊದಲ ಬಾರಿಗೆ ಪ್ರಣಿತಿ ಶಿಂಧೆ ಜೊತೆ ಕಾಣಿಸಿಕೊಂಡಾಲೇ ರೂಮರ್ಸ್‌ ಶುರುವಾಗಿದ್ದವು.. ಇದೀಗ ಮತ್ತೆ ಈ ಬಗ್ಗೆ ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ಹಬ್ಬಿಸುತ್ತಿದ್ದಾರೆ.. ಆದ್ರೆ ಇದನ್ನು ಯಾರೂ ಕೂಡಾ ಅಧಿಕೃತವಾಗಿ ಹೇಳಿಲ್ಲ.. ಹೀಗಾಗಿ ಈ ಸುದ್ದಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ..

Share Post