CrimeNational

ಮತ್ತೊಂದು ರೈಲು ದುರಂತಕ್ಕೆ ಸ್ಕೆಚ್‌!; ಹಳಿ ಮೇಲೆ ಸಿಮೆಂಟ್‌ ಬ್ಲಾಕ್‌!

ಅಜ್ಮೀರ್‌; ನಿನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ ಕಾಳಿಂದಿ ರೈಲು ಸ್ಫೋಟಿಸಲು ಉಗ್ರರು ಸಂಚು ಮಾಡಿ ವಿಫಲರಾಗಿದ್ದರು.. ಇದೀಗ ರಾಜಸ್ಥಾನದ ಸರದಿ.. ರಾಜಸ್ಥಾನದ ಅಜ್ಮೀರ್‌-ಅಹಮದಾಬಾದ್‌ ಮಾರ್ಗದಲ್ಲಿ ರೈಲು ಹಳಿ ಮೇಲೆ ಭಾರೀ ಗಾತ್ರದ ಸಿಮೆಂಟ್‌ ಬ್ಲಾಕ್‌ ಇಟ್ಟು, ರೈಲು ಹಳಿ ತಪ್ಪಿಸಿ ದುರಂತಕ್ಕೆ ಯತ್ನ ಮಾಡಲಾಗಿದೆ.. ಗೂಡ್ಸ್‌ ರೈಲು ಇದಕ್ಕೆ ಗುದ್ದಿದ್ದು, ಅದು ಹಳಿ ತಪ್ಪಿದೆ.. ಗೂಡ್ಸ್‌ ರೈಲಾಗಿದ್ದರಿಂದ ಯಾವುದೇ ಅನಾಹುತ ನಡೆದಿಲ್ಲ..
ಅಜ್ಮೀರ್‌ನ ಫುಲೇರಾದಿಂದ ಗುಜರಾತ್ನ ಅಹಮದಾಬಾದ್‌ಗೆ ಗೂಡ್ಸ್‌ ರೈಲು ಪ್ರಯಾಣಿಸುತ್ತಿತ್ತು.. ಶಾರಧನ ರೈಲು ನಿಲ್ದಾಣದ ಬಳಿ ರೈಲು ಬಂದಾಗ ಹಳಿ ಮೇಲಿದ್ದ ಭಾರೀ ಗಾತ್ರದ ಕಾಂಕ್ರೀಟ್‌ ಬ್ಲಾಕ್‌ಗೆ ಅದು ಗುದ್ದಿದೆ.. ದುಷ್ಕರ್ಮಿಗಳು ಬೇಕಂತಲೇ ಹಳಿ ಮೇಲೆ ಮೈಲು ಕಲ್ಲನ್ನು ತಂದು ಇಟ್ಟಿದ್ದರು ಎನ್ನಲಾಗಿದೆ.. ಗೂಡ್ಸ್‌ ರೈಲು ಗುದ್ದಿದ್ದರಿಂದ ಅದು ಅಲ್ಲಿಯೇ ಹಳಿ ತಪ್ಪಿದೆ..
ಗೂಡ್ಸ್‌ ರೈಲಾಗಿದ್ದರಿಂದ ಯಾವುದೇ ಅನಾಹುತವಾಗಿಲ್ಲ.. ಆದ್ರೆ ಈ ಭಾಗದಲ್ಲಿ ಕೆಲಕಾಲ ರೈಲು ಸಂಚಾರ ರದ್ದು ಮಾಡಲಾಗಿತ್ತು.. ಇದರಿಂದ ಪ್ರಯಾಣಿಕರು ಪರದಾಡಬೇಕಾಯಿತು..

Share Post