CrimeNational

3 ವರ್ಷದ ಮಗುವನ್ನು ಕೊಂದು ವಾಷಿಂಗ್‌ ಮಷಿನ್‌ನಲ್ಲಿ ಬಚ್ಚಿಟ್ಟ ಮಹಿಳೆ!

ತಿರುನಲ್ವೇಲಿ(Tamilnadu); ಬಾಲಕನ ತಂದೆಯ ಮೇಲಿನ ದ್ವೇಷಕ್ಕೆ 3 ವರ್ಷದ ಬಾಲಕನನ್ನು ಕೊಲೆ ಮಾಡಿದ ಮಹಿಳೆ, ದೇಹವನ್ನು ವಾಷಿಂಗ್‌ ಮಷಿನ್‌ನಲ್ಲಿ ಬಚ್ಚಿಟ್ಟಿದ್ದ ಘಟನೆ ನಡೆದಿದೆ.. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಂ ಬಳಿಯ ಆತುಕುರಿಚಿ ಎಂಬಲ್ಲಿ ಈ ಕೃತ್ಯ ಎಸಗಲಾಗಿದೆ.. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುವ ವಿಘ್ನೇಶ್‌ ಎಂಬುವರ ಮೂರು ವರ್ಷದ ಪುತ್ರ ಸಂಜಯ್‌ ಎಂಬಾತನೇ ಕೊಲೆಯಾಗಿರುವ ಬಾಲಕನಾಗಿದ್ದಾನೆ..
ವಿಘ್ನೇಶ್‌ ಹಾಗೂ ರಮ್ಯಾ ದಂಪತಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.. ಇವರ ಮಗನೇ ಸಂಜಯ್‌.. ಸಂಜಯ್‌ ಮನೆಯ ಬಳಿ ಆಟವಾಡುತ್ತಿದ್ದ.. ಆತನನ್ನು ಅಂಗನವಾಡಿಗೆ ಕಳುಹಿಸಲು ಸಿದ್ಧತೆ ಮಾಡಬೇಕಿತ್ತು.. ಅದಕ್ಕಾಗಿ ತಾಯಿ ರಮ್ಯಾ ಮನೆಯಿಂದ ಹೊರಬಂದು ಮಗನಿಗಾಗಿ ಹುಡುಕಾಡಿದ್ದಾಳೆ.. ಆದ್ರೆ ಆಟವಾಡುತ್ತಿದ್ದ ಮಗ ಇದ್ದಕ್ಕಿದ್ದಂತೆ ಕಾಣದಂತಾಗಿದ್ದ.. ಬೀದಿ ಬೀದಿಯಲ್ಲಿ ಹುಡುಕಾಟ ನಡೆಸಿದರೂ ಬಾಲಕ ಸಿಗಲಿಲ್ಲ.. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಯಿತು..
ಪೊಲೀಸರು ಕೂಡಾ ಎಲ್ಲಾ ಕಡೆ ಹುಡುಕಾಡಿ ಸುಸ್ತಾಗಿದ್ದರು.. ಕೊನೆಗೆ ಪಕ್ಕದ ಮನೆಯ ತಂಗಮ್ಮಾಳ್‌ ಮನೆಯಲ್ಲಿ ಹುಡುಕಾಡಿದಾಗ, ಅವರ ಮನೆಯ ವಾಷಿಂಗ್‌ ಮಷಿನ್‌ನಲ್ಲಿ ಗೋಣಿಚೀಲದ ಗಂಟೊಂದು ಸಿಕ್ಕಿದೆ.. ಅದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಸಂಜಯ್‌ ಮೃತದೇಹ ಸಿಕ್ಕಿದೆ.. ಕೂಡಲೇ ಪೊಲೀಸರು ಆರೋಪಿ ತಂಗಮ್ಮಾಳ್‌ಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.. ಈ ವೇಳೆ ವಿಘ್ನೇಶ್‌ ಹಾಗೂ ತಂಗಮ್ಮಾಳ್‌ ನಡುವೆ ದ್ವೇಷವಿತ್ತು.. ಇದೇ ಕಾರಣಕ್ಕೆ ಈ ಕೊಲೆ ಮಾಡಿರಬಹುದು ಎಂಬ ಸಂಶಯ ಬಂದಿದೆ.. ಇದರ ಹಿಂದೆ ಇನ್ನೂ ಯಾರಾದರೂ ಇದ್ದಾರಾ ಎಂಬುದರ ಬಗ್ಗೆ ತನಿಖೆ ಶುರುವಾಗಿದೆ..
ತಂಗಮ್ಮಾಳ್‌ ಕೂಡಾ ತನ್ನ ಮಗನನ್ನು ಕಳೆದುಕೊಂಡಿದ್ದಳು.. ಅಂದಿನಿಂದ ಆಕೆಯ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂದು ಹೇಳಲಾಗುತ್ತಿದೆ.. ಈ ಕಾರಣಕ್ಕಾಗಿಯೇ ಆಕೆ ಎಲ್ಲರೊಂದಿಗೆ ಜಗಳ ಮಾಡಿಕೊಳ್ಳುತ್ತಿದ್ದಳು ಎನ್ನಲಾಗಿದೆ..

Share Post