ಇವನೆಂಥಾ ಮಗ..?; ರಸ್ತೆಯಲ್ಲೇ ತಂದೆ-ತಾಯಿಗೆ ಚಪ್ಪಲಿಯಿಂದ ಹಲ್ಲೆ!
ಶ್ರೀನಗರ (ಕಾಶ್ಮೀರ); ತಂದೆ-ತಾಯಿಯನ್ನು ದೇವರಿಗೆ ಸಮಾನ ಅಂತಾರೆ.. ಆದ್ರೆ ಇಲ್ಲೊಬ್ಬ ದುರುಳ ಮಗ ತಮ್ಮ ತಂದೆ-ತಾಯಿಯನ್ನು ನಡು ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದಿದ್ದಾನೆ.. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ..
ಮೊಹಮ್ಮದ್ ಅಶ್ರಫ್ ವಾನಿ ಎಂಬಾತನೇ ಈ ಕೃತ್ಯ ಎಸಗಿರುವಾತ.. ತಾಯಿ ತಾಜಾ ಬೇಗಂ ಮತ್ತು ತಂದೆ ಗುಲಾಮ್ ಅಹ್ಮದ್ ವಾನಿ ಎಂಬುವವರ ಮೇಲೆ ಮಗ ಅಶ್ರಫ್ ವಾನಿ ದಾಳಿ ಮಾಡಿದ್ದಾನೆ.. ನಡು ರಸ್ತೆಯಲ್ಲೇ ತಂದೆ ತಾಯಿ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ.. ಇದನ್ನು ಅಲ್ಲಿದ್ದವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ.. ಯಾಕೆ ಈ ರೀತಿ ತಂದೆ ತಾಯಿಯ ಮೇಲೆ ಹಲ್ಲೆ ನಡೆದಿದೆ ಎಂಬುದರ ಮಾಹಿತಿ ಸಿಕ್ಕಿಲ್ಲ..
ನೌಗಾವ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.. ಆರೋಪಿಯ ವಿಚಾರಣೆ ನಡೆಸಿದ್ದಾರೆ.. ಸ್ಥಳೀಯರ ಮಾಹಿತಿ ಪ್ರಕಾರ ದಂಪತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.. ಈ ವೇಳೆ ಬೈಕ್ನಲ್ಲಿ ಬಂದ ಮಗ ಇದ್ದಕ್ಕಿದ್ದಂತೆ ಜಗಳ ತೆಗೆದಿದ್ದಾನೆ.. ಇಬ್ಬರ ಮೇಲೂ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ..