BengaluruCrime

ರೇಣುಕಾಸ್ವಾಮಿ ಕೊಲೆಯಲ್ಲಿ ಈ ಮೂವರು ಭಾಗಿಯೇ ಆಗಿಲ್ಲವಂತೆ!

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ.. ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲು ಕೊನೇ ಹಂತದ ತಯಾರಿ ನಡೆಸಿದೆ.. ಇನ್ನೆರಡು ದಿನದಲ್ಲಿ ಪ್ರಕರಣದ ಚಾರ್ಜ್‌ ಶೀಟ್‌ ಸಲ್ಲಿಸೋದಾಗಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ತಿಳಿಸಿದ್ದಾರೆ.. ಇನ್ನು ಈ ಪ್ರಕರಣದಲ್ಲಿ ಬಂಧಿತರಾಗಿರುವ 17 ಮಂದಿಯ ಪೈಕಿ ಮೂವರು, ಈ ಕೊಲೆ ಕೇಸ್‌ನಲ್ಲಿ ಭಾಗಿಯೇ ಆಗಿಲ್ಲ ಎಂಬ ಮಹತ್ವ ಮಾಹಿತಿ ಹೊರಬಿದ್ದಿದೆ..

ಇದನ್ನೂ ಓದಿ; ಮದುವೆ ನಿಶ್ಚಯವಾಗಿದ್ದ ಯುವತಿ ಮೇಲೆ ಅತ್ಯಾಚಾರ!

ಬಂಧನದಲ್ಲಿರುವ ಆರೋಪಿಗಳಾದ ನಿಖಿಲ್‌ ನಾಯ್ಕ್‌, ಕೇಶವಮೂರ್ತಿ ಹಾಗೂ ಕಾರ್ತೀಕ್‌ ಎಂಬುವವರು ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯೇ ಆಗಿಲ್ಲವಂತೆ!. ಹೀಗಂತ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಡಲಾಗಿದೆ ಎಂದು ಹೇಳಲಾಗುತ್ತಿದೆ.. ಈ ಮೂವರೂ ಕೂಡಾ ಯಾವಾಗೇ ಬಂದು ಕಾಮಾಕ್ಷಿ ಪಾಳ್ಯ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದರು.. ಹಣಕಾಸಿನ ವಿಚಾರಕ್ಕೆ ರೇಣುಕಾಸ್ವಾಮಿ ಕೊಲೆ ಮಾಡಿದ್ದೇವೆ ಎಂದು ಹೇಳಿದ್ದರು.. ಆದ್ರೆ ಇವರು ಕೊಲೆ ಸಮಯದಲ್ಲಿ ಅಲ್ಲಿ ಇರಲೇ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ.. ಮೃತದೇಹದ ಸಾಗಾಟ ಹಾಗೂ ಶರಣಾಗತಿ ಸಮಯದಲ್ಲಿ ಮಾತ್ರ ಈ ಮೂವರು ಒಟ್ಟಿಗೆ ಇದ್ದರು ಅನ್ನೋದು ವಿಚಾರಣೆ ವೇಳೆ ಗಿತ್ತಾಗಿದೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಆಸ್ಪತ್ರೆಯಲ್ಲಿದ್ದ ಮಗನ ಬದುಕಿಸಲು ಮಹಿಳೆಯನ್ನು ಕೊಂದು ಹಣ ತಂದ ಅಪ್ಪ!

ಈ ಮೂವರ ವಿರುದ್ಧ ಕೊಲೆಗೆ ಸಂಬಂಧಿಸಿದ ಸಾಕ್ಷ್ಯಗಳಿಲ್ಲ.. ಬದಲಾಗಿ ಸಾಕ್ಷ್ಯನಾಶಕ್ಕೆ ಯತ್ನ ಹಾಗೂ ಪೊಲೀಸರಿಗೆ ಸುಳ್ಳು ಹೇಳಿದ ಆರೋಪ ಮಾತ್ರ ಇದೆ.. ಹೀಗಾಗಿ ಈ ಮೂವರಿಗೂ ಬೇಗ ಜಾಮೀನು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಇನ್ನು ದರ್ಶನ್‌ ವಿರುದ್ಧ ಬಲವಾದ ಸಾಕ್ಷ್ಯಗಳು ಸಿಕ್ಕಿದ್ದು, ಚಾರ್ಜ್‌ಶೀಟ್‌ ಸಲ್ಲಿಸಿದ ನಂತರ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಬಹುದು ಎಂದು ಹೇಳಲಾಗುತ್ತಿದೆ..

Share Post