CrimeNational

ಶಾಸಕರ ಮನೆಗೆ ನುಗ್ಗಿದ ಕಳ್ಳರ ಗುಂಪು!; ಅವರು ಕದ್ದಿದ್ದು ಕೇಳಿದ್ರೆ ನಗಾಡ್ತೀರಿ!

ಲಖನೌ(Uttarpradesh); ಕಳ್ಳರು ಮನೆಗೆ ನುಗ್ಗಿದ್ದಾರೆ ಎಂದರೆ ಚಿನ್ನಾಭರಣ ಹಾಗೂ ಹಣಕ್ಕೆ ಕೈಹಾಕುತ್ತಾರೆ.. ಯಾಕಂದ್ರೆ, ಚಿನ್ನಾಭರಣ ಹಾಗೂ ಹಣವನ್ನು ಎತ್ತಿಕೊಂಡು ಹೋಗಲು ಸುಲಭವಾಗುತ್ತದೆ.. ಜೊತೆಗೆ ಬಳಸಿಕೊಳ್ಳುವುದಕ್ಕೂ ಚೆನ್ನಾಗಿರುತ್ತದೆ.. ಆದ್ರೆ ಉತ್ತರ ಪ್ರದೇಶದಲ್ಲಿ ಕಳ್ಳರ ಗುಂಪೊಂದು ಶಾಸಕರೊಬ್ಬರ ಮನೆಗೆ ನುಗ್ಗಿದೆ.. ಯಾರಿಗೂ ಗೊತ್ತಿಲ್ಲದಂತೆ ಶಾಸಕರ ಮನೆಯಲ್ಲಿ ಕಳವು ಕೂಡಾ ಮಾಡಿದ್ದಾರೆ.. ಆದ್ರೆ ಅವ್ರು ಕಳವು ಮಾಡಿರೋ ವಸ್ತುಗಳ ಬಗ್ಗೆ ಕೇಳಿದರೆ ನಿಮಗೂ ನಗು ಬರುತ್ತೆ..

ಇದನ್ನೂ ಓದಿ; ಗಂಡನನ್ನು ಕೊಂದು ಬಾತ್‌ರೂಮ್‌ನಲ್ಲಿ ಸಮಾಧಿ ಮಾಡಿದ ಪತ್ನಿ!

ಯಾಕಂದ್ರೆ, ಶಾಸಕರ ಮನೆಗೆ ನುಗ್ಗಿದರೂ ಕಳ್ಳರು ಚಿನ್ನಾಭರಣವನ್ನಾಗಲೀ, ಹಣವನ್ನಾಗಲೀ ಮುಟ್ಟಿಲ್ಲ.. ಬದಲಾಗಿ ನೀರಿನ ಟ್ಯಾಂಕ್‌ ಹಾಗೂ ನಲ್ಲಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.. ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ಸಿದ್ಧಾರ್ಥನಗರ ಶೋಹರತ್‌ಗಢ ಕ್ಷೇತ್ರದ ಶಾಸಕ ವಿನಯ್‌ ವರ್ಮಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.. ಶಾಸಕ ವಿನಯ್‌ ವರ್ಮಾ ಅವರ ಬಟ್ಲರ್​ ಪ್ಯಾಲೇಸ್​​​​ ಕಾಲೋನಿಯ ಸರ್ಕಾರಿ ನಿವಾಸದಲ್ಲಿ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ. ಈ ವೇಳೆ ಅಲ್ಲಿಗೆ ನುಗ್ಗಿರುವ ಕಳ್ಳರ ಗುಂಪೊಂದು ನೀರಿನ ಟ್ಯಾಂಕ್‌ ಹಾಗೂ ನಲ್ಲಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.. ಅಡುಗೆ ಮನೆ, ಡೈನಿಂಗ್‌ ಹಾಲ್‌ ಹಾಗೂ ಸ್ವಾನದ ಕೋಣೆಯಲ್ಲಿರುವ ನಲ್ಲಿಗಳನ್ನು ಕಿತ್ತುಕೊಂಡು ಹೋಗಿದ್ದಾರೆ..

ಇದನ್ನೂ ಓದಿ; ಚನ್ನಪಟ್ಟಣ ಜೆಡಿಎಸ್‌ಗೆ ಬಿಟ್ಟುಕೊಡೋದು ಪಕ್ಕಾ?; ಯೋಗೇಶ್ವರ್‌ ತೀರ್ಮಾನ ಏನು..?

ಶಾಸಕರ ನಿವಾಸದ ಬಳಿ ಪೊಲೀಸರ ಭದ್ರತೆ ಇದೆ.. ಹೀಗಿದ್ದರೂ ಅದು ಹೇಗೆ ಕಳ್ಳರು ಒಳನುಗ್ಗಿದರು..? ಹೇಗೆ ಕಳ್ಳತನ ಮಾಡಿದರು ಎಂಬ ಬಗ್ಗೆ ಹಲವು ಅನುಮಾನಗಳು ಮೂಡಿವೆ..

 

Share Post