ಗಂಡನನ್ನು ಕೊಂದು ಬಾತ್‌ರೂಮ್‌ನಲ್ಲಿ ಸಮಾಧಿ ಮಾಡಿದ ಪತ್ನಿ!
ಜೈಪುರ(Rajasthan); ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದು ಬಾತ್‌ರೂಮ್‌ನಲ್ಲಿ ಸಮಾಧಿ ಮಾಡಿರುವ ಘಟನೆ ನಡೆದಿದೆ.. ರಾಜಸ್ಥಾನದ ಹನುಮಾನ್‌ಗಢದಲ್ಲಿ ಈ ಘಟನೆ ನಡೆದಿದ್ದು, ಕೊನೆಗೂ ಪ್ರಕರಣ ಬಯಲಿಗೆ ಬಂದಿದೆ.. ಈ ವಿಚಾರ ಕೇಳಿ ಸುತ್ತಮುತ್ತಲ ವಾಸಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ..
ಇದನ್ನೂ ಓದಿ; ಚನ್ನಪಟ್ಟಣ ಜೆಡಿಎಸ್‌ಗೆ ಬಿಟ್ಟುಕೊಡೋದು ಪಕ್ಕಾ?; ಯೋಗೇಶ್ವರ್ ತೀರ್ಮಾನ ಏನು..?
16 ದಿನಗಳಿಂದ ಹನುಮಾನ್‌ಗಢದ ರೂಪರಾಮ್ ಎಂಬುವವರು ನಾಪತ್ತೆಯಾಗಿದ್ದರು.. ಊರಿನವರಿಗೆ ಯಾರಿಗೂ ಕಾಣಿಸಿಕೊಂಡಿರಲಿಲ್ಲ.. ಅಕ್ಕಪಕ್ಕದವರು ಬೇರೆ ಯಾವುದಾದರೂ ಊರಿಗೆ ಹೋಗಿರಬಹುದು ಎಂದೇ ತಿಳಿದಿದ್ದರು.. ಯಾವಾಗ ಪೊಲೀಸರು ಎಂಟ್ರಿಯಾದರೋ ಆಗಲೇ ಅವರಿಗೆ ನಿಜ ವಿಷಯ ಗೊತ್ತಾರೋದು.. ಯಾಕಂದ್ರೆ, ರೂಪರಾಮ್ ಅವರು 16 ದಿನ ಆದರೂ ಬರದಿದ್ದಾಗ, ಹೆಂಡತಿಯೇ ಏನೋ ಮಾಡಿದ್ದಾಳೆ ಎಂದು ಆತನ ಪೋಷಕರಿಗೆ ಅನುಮಾನ ಬಂದಿದೆ.. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..
ಪೊಲೀಸರು ಬಂದು ಹೆಂಡತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜ ವಿಷಯ ಬಾಯಿ ಬಿಟ್ಟಿದ್ದಾಳೆ.. ಪತಿಯನ್ನು ಕೊಂದು ಬಾತ್‌ರೂಮ್‌ನಲ್ಲಿ ಶವವನ್ನು ಹೂತು ಹಾಕಿದ್ದೇನೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ.. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾತ್‌ರೂಮ್‌ನಲ್ಲಿ ಅಗೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದೆ..
ಇದನ್ನೂ ಓದಿ; ಬೆಡ್‌ರೂಮ್‌ನಲ್ಲಿ ಮೈದುನನ ಖಾಸಗಿ ಅಂಗ ಕತ್ತರಿಸಿ ಎಸೆದ ಅತ್ತಿಗೆ!
ಬೇರೆ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ, ಇದಕ್ಕೆ ಗಂಡ ಅಡ್ಡಿಯಾಗುತ್ತಿದ್ದಾನೆಂಬ ಕಾರಣದಿಂದಾಗಿ ಆತನನ್ನು ರಾತ್ರಿ ವೇಳೆಯಲ್ಲಿ ಕೊಲೆ ಮಾಡಿ ಮನೆಯಲ್ಲೇ ಹೂತು ಹಾಕಿದ್ದಳು.. ನಂತರ ತನಗೇನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಆಕೆ ವರ್ತನೆ ಮಾಡುತ್ತಿದ್ದಳು.. ಆದ್ರೆ ಮೃತನ ಪೋಷಕರಿಗೆ ಆಕೆಯ ಮೇಲೆಯೇ ಅನುಮಾನ ಬಂದಿತ್ತು.. ವಿಚಾರಣೆಯಲ್ಲಿ ಅದು ನಿಜ ಅನ್ನೋದು ಗೊತ್ತಾಗಿದೆ..