ಚನ್ನಪಟ್ಟಣ ಜೆಡಿಎಸ್‌ಗೆ ಬಿಟ್ಟುಕೊಡೋದು ಪಕ್ಕಾ?; ಯೋಗೇಶ್ವರ್ ತೀರ್ಮಾನ ಏನು..?
ರಾಮನಗರ; ಚನ್ನಪಟ್ಟಣ ಉಪಚುನಾವಣೆಗೆ ಮೈತ್ರಿ ಪಕ್ಷಗಳ ಟಿಕೆಟ್ ಯಾರ ಪಾಲಾಗುತ್ತೆ ಅನ್ನೋದರ ಗೊಂದಲಕ್ಕೆ ತೆರೆಬಿದ್ದಿದೆ ಎಂದು ಹೇಳಲಾಗುತ್ತಿದೆ.. ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ತೀರ್ಮಾನ ಮಾಡಿದೆ ಎಂದು ಹೇಳಲಾಗುತ್ತಿದೆ.. ಈ ಹಿನ್ನೆಲೆಯಲ್ಲಿ ಸಿ.ಪಿ.ಯೋಗೇಶ್ವರ್ ನಿರ್ಧಾರ ಏನಾಗುತ್ತೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ..
ಇದನ್ನೂ ಓದಿ; ಬೆಡ್‌ರೂಮ್‌ನಲ್ಲಿ ಮೈದುನನ ಖಾಸಗಿ ಅಂಗ ಕತ್ತರಿಸಿ ಎಸೆದ ಅತ್ತಿಗೆ!
ಬಿಜೆಪಿ ಹೈಕಮಾಂಡ್‌ನಿಂದ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಬಿಟ್ಟುಕೊಡುವುದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು, ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯೋದು ಬಹುತೇಕ ಪಕ್ಕಾ ಆಗಿದೆ.. ಹೀಗಿರುವಾಗಲೇ ಜೆಡಿಎಸ್‌ನ ಎಚ್.ಸಿ.ಜಯಮುತ್ತು ಅಲರ್ಟ್ ಆಗಿದ್ದಾರೆ.. ಕ್ಷೇತ್ರದಲ್ಲಿ ಬಿರುಸಿನ ಓಡಾಟ ನಡೆಸಿದ್ದಾರೆ..ಗೌರಿ-ಗಣೇಶ ಹಬ್ಬಕ್ಕೆ ಸಾವಿರಾರು ಗಣೇಶ ಮೂರ್ತಿಗಳನ್ನು ಹಂಚಿಕೆ ಮಾಡಲು ಮುಂದಾಗಿದ್ದಾರೆ. ಸಿ.ಪಿ.ಯೋಗೇಶ್ವರ್ ಕೂಡಾ ಇದೇ ಮಾರ್ಗ ಅನುಸರಿಸುತ್ತಿದ್ದಾರೆ.. ಇನ್ನು ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯೋದು ಬಹುತೇಕ ಪಕ್ಕಾ ಆಗಿರುವುದರಿಂದ ಸಿ.ಪಿ.ಯೋಗೇಶ್ವರ್ ಬಂಡಾಯವಾಗಿ ಸ್ಪರ್ಧೆ ಮಾಡುತ್ತಾರಾ..? ಅಥವಾ ಕಾಂಗ್ರೆಸ್ ಪಕ್ಷಕ್ಕೆ ಪಲಾಯನ ಮಾಡುತ್ತಾರಾ ಎಂಬುದರ ಬಗ್ಗೆ ಕುತೂಹಲ ಕೆರಳಿಸಿದೆ..
ಇದನ್ನೂ ಓದಿ; ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಉಪನ್ಯಾಸಕ ಅತ್ಯಾಚಾರ!
ಇನ್ನು ಬಿಜೆಪಿಯ ರಾಜ್ಯ ನಾಯಕರು ಕುಮಾರಸ್ವಾಮಿಯವರ ಮನವೊಲಿಸಲು ಮುಂದಾಗಿದ್ದಾರೆ.. ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ್ ಅವರನ್ನೇ ಸ್ಪರ್ಧೆ ಮಾಡಿಸೋದಕ್ಕೆ ರಾಜ್ಯ ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ.. ಇದಕ್ಕೆ ಕುಮಾರಸ್ವಾಮಿ ಒಪ್ಪಿದರೆ ಸಾಧ್ಯವಾಗಬಹುದು..