ಮದುವೆಯಾಗಿ ಮಕ್ಕಳು ಮಾಡಿಕೊಂಡ್ರೆ ಸರ್ಕಾರ 31 ಲಕ್ಷ ರೂಪಾಯಿ ಕೊಡುತ್ತೆ!
ದಕ್ಷಿಣ ಕೊರಿಯಾ; ಭಾರತದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಸಮಸ್ಯೆಯಾಗುತ್ತಿದೆ.. ಇಲ್ಲಿ ಒಬ್ಬರಿಗೆ ಒಂದು ಮಗು ಸಾಕು ಎಂದು ಹೇಳುವ ಕಾಲ ಬಂದಿದೆ.. ಆದ್ರೆ ದಕ್ಷಿಣ ಕೊರಿಯಾದಲ್ಲಿ ಮದುವೆಯಾಗಿ ಮಕ್ಕಳು ಮಾಡಿಕೊಂಡವರಿಗೆ 31 ಲಕ್ಷ ರೂಪಾಯಿ ನೀಡೋದಾಗಿ ಘೋಷಣೆ ಮಾಡಲಾಗಿದೆ.. ದಕ್ಷಿಣ ಕೊರಿಯಾದಲ್ಲಿ ಯುವಕ-ಯುವತಿಯರು ಮದುವೆ ಹಾಗೂ ಮಕ್ಕಳ ಬಗ್ಗೆ ಆಸಕ್ತಿಯೇ ತೋರುತ್ತಿಲ್ಲವಂತೆ. ಹೀಗಾಗಿ ಈ ಆಫರ್ ನೀಡಲಾಗಿದೆ..
ಇದನ್ನೂ ಓದಿ; ಅಸ್ನಾ ಸೈಕ್ಲೋನ್ ಎಫೆಕ್ಟ್; ಇವತ್ತೂ ಬೆಂಗಳೂರಲ್ಲಿ ಮಳೆ ಸಾಧ್ಯತೆ!
ದಕ್ಷಿಣ ಕೊರಿಯಾದಲ್ಲಿ ಯುವಕರು ಹಾಗೂ ಯುವತಿಯರು ಹೆಚ್ಚಾಗಿ ಮದುವೆಯಾಗದೆ ಒಂಟಿಯಾಗಿ ಬಾಳೋದಕ್ಕೆ ಇಷ್ಟಪಡುತ್ತಿದ್ದಾರೆ.. ಮದುವೆಯಾಗ್ರೋ ಅಂತ ಗೋಗರೆದರೂ ಅದಕ್ಕೆ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ಅಲ್ಲಿನ ಸರ್ಕಾರ ಮದುವೆಯಾಗಿ ಮಕ್ಕಳು ಮಾಡಿಕೊಂಡವರಿಗೆ ಹಣ ನೀಡುವುದಾಗಿ ಆಫರ್ ನೀಡುತ್ತಿದೆ.. ನಮ್ಮ ಭಾರತ ರೂಪಾಯಿಯಂತೆ ಲೆಕ್ಕ ಹಾಕಿದರೆ ಒಬ್ಬೊಬ್ಬರಿಗೆ 31 ಲಕ್ಷ ರೂಪಾಯಿ ನೀಡಲಾಗುತ್ತದಂತೆ..
ಇದನ್ನೂ ಓದಿ; ಟೊಮ್ಯಾಟೋ 6 ತಿಂಗಳು ಕೆಡದಂತೆ ಸಂಗ್ರಹಿಸಿಡುವ ಸುಲಭ ಟೆಕ್ನಿಕ್ ಇದು!
ದಕ್ಷಿಣ ಕೊರಿಯಾದಲ್ಲಿ ಜನನ ಪ್ರಮಾಣ ಕುಸಿದಿದ್ದು, ಜನಸಂಖ್ಯೆ ಕುಸಿತವಾಗುತ್ತಿದೆ.. ಜೊತೆಗೆ ಯುವಕರ ಸಂಖ್ಯೆ ಕೂಡಾ ಕಡಿಮೆಯಾಗುತ್ತಿದೆ.. ಈಗ ಈ ದೇಶದಲ್ಲಿ ಜನನ ಪ್ರಮಾಣ 0.72 ರಷ್ಟಿದೆ ಎಂದು ತಿಳಿದುಬಂದಿದೆ.. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಮದುವೆ ಹಾಗೂ ಮಕ್ಕಳು ಮಾಡಿಕೊಳ್ಳುವವರನ್ನು ಪ್ರೇರೇಪಿಸುತ್ತಿದೆ..