DistrictsNational

ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಕ್ಯಾಮೆರಾ..!

ಅಮರಾವತಿ(Andhrapradesh); ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ.. ಇದರ ಜೊತೆಜೊತೆಯಲ್ಲೇ ಈ ಹಿಂದೆ ತಮ್ಮ ಮೇಲಾದ ದೌರ್ಜನ್ಯಗಳ ಬಗ್ಗೆ ಧೈರ್ಯದಿಂದ ಹೊರಬಂದು ಹೇಳುವವರೂ ಹೆಚ್ಚಾಗುತ್ತಿದ್ದಾರೆ.. ಇದರ ನಡುವೆಯೂ ಹೆಣ್ಣು ಮಕ್ಕಳಿಗೆ ಅವಮಾನ ಮಾಡುವ, ಅವರನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳೂ ಕೂಡಾ ಮುಂದುವರೆಯುತ್ತಲೇ ಇವೆ.. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. ಎಂಜಿನಿಯರಿಂಗ್‌ ಕಾಲೇಜೊಂದರ ವಿದ್ಯಾರ್ಥಿನಿಯರ ಟಾಯ್ಲೆಟ್‌ನಲ್ಲಿ ಯಾರೋ ಕ್ಯಾಮರಾ ಅಳವಡಿಸಿ ರೆಕಾರ್ಡ್‌ ಮಾಡಿದ್ದಾರೆ.. ಅದು ಹೇಗೋ ಒಬ್ಬ ವಿದ್ಯಾರ್ಥಿನಿಗೆ ಗೊತ್ತಾಗಿ ಮಾಹಿತಿ ನೀಡಿದ್ದಾಳೆ..

ಇದನ್ನೂ ಓದಿ; BREAKING: ಸಿದ್ದರಾಮಯ್ಯ ಅವರಿಗೆ ಇನ್ನೂ ಎರಡು ದಿನ ರಿಲೀಫ್‌

ಕೃಷ್ಣಾ ಜಿಲ್ಲೆಯ ಗುಡ್ಲವಲ್ಲೇರು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಹಿಳಾ ಶೌಚಾಲಯದಲ್ಲಿ ಗುಪ್ತವಾಗಿ ಕ್ಯಾಮರಾಗಳನ್ನು ಅಳವಡಿಸಿ ದುಷ್ಕರ್ಮಿಗಳು ರೆಕಾರ್ಡ್‌ ಮಾಡುತ್ತಿದ್ದರು.. ಇದನ್ನು ನೋಡಿದ ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದು, ಕಾಲೇಜು ಆಡಳಿತ ಮಂಡಳಿಗೆ ವಿಷಯ ಮುಟ್ಟಿಸಿದ್ದಾರೆ.. ಆದ್ರೆ ಆಡಳಿತ ಮಂಡಳಿ ಇದಕ್ಕೆ ಸರಿಯಾಗಿ ಸ್ಪಂದಿಸಿಲ್ಲ ಅನ್ನೋದು ವಿದ್ಯಾರ್ಥಿನಿಯರ ಆರೋಪ. ಹೀಗಾಗಿ ನ್ಯಾಯ ಬೇಕೆಂದು ವಿದ್ಯಾರ್ಥಿನಿಯರು ಹೋರಾಟ ಆರಂಭಿಸಿದ್ದಾರೆ.. ಗುರುವಾರ ಕಾಲೇಜಿನಲಲಿ ಜಮಾಯಿಸಿದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.. ಆದರೆ ಕಾಲೇಜು ಆಡಳಿತ ಮಂಡಳಿ ಈ ವಿಷಯವನ್ನು ಗೌಪ್ಯವಾಗಿಡಲು ಯತ್ನಿಸುತ್ತಿದೆ.

ಇದನ್ನೂ ಓದಿ; ಆ ರಾಜಕಾರಣಿಯ ಕಾಮದಾಟಕ್ಕೆ ಲೈವ್‌ನಲ್ಲೇ ಕಣ್ಣೀರಿಟ್ಟ ಖ್ಯಾತ ನಟಿ!

Share Post