LifestyleNational

ಗರ್ಭ ಧರಿಸೋದಕ್ಕೆ ಭಾರತದ ಈ ಹಳ್ಳಿಗೆ ಬರ್ತಾರಂತೆ ಯೂರೋಪ್‌ ಮಹಿಳೆಯರು!

ನವದೆಹಲಿ; ನಾನಾ ಕಾರಣಕ್ಕಾಗಿ ಜನ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಿರುತ್ತಾರೆ.. ಕೆಲವರು ಪ್ರವಾಸಕ್ಕೆ ಹೋದರೆ, ಕೆಲವರು ಚಿಕಿತ್ಸೆಗೆಂದು ಹೋಗುತ್ತಾರೆ.. ಹೀಗೆ ನಾನಾ ಕಾರಣಗಳಿರುತ್ತವೆ.. ಆದ್ರೆ ಇಲ್ಲೊಂದು ಗ್ರಾಮ ಇದೆ.. ಈ ಗ್ರಾಮದಲ್ಲಿ ವಿದೇಶಗಳಿಂದ ಮಹಿಳೆಯರು ಬರುತ್ತಾರೆ.. ಅವರು ಇಲ್ಲಿಗೆ ಬರೋದು ಎಂಜಾಯ್‌ ಮಾಡೋದಕ್ಕಲ್ಲ, ಗರ್ಭ ಧರಿಸೋದಕ್ಕೆ.. ಅಚ್ಚರಿಯಾದರೂ ಇದು ನಿಜ..
ಕಾರ್ಗಿಲ್‌ನಿಂದ ಸುಮಾರು 70 ಕಿಮೀ ದೂರದಲ್ಲಿ ಲಡಾಖ್‌ ಬಳಿಯ ಆರ್ಯ ಕಣಿವೆ ಎಂಬ ಗ್ರಾಮವಿದೆ.. ಈ ಗ್ರಾಮಕ್ಕೂ ಯೂರೋಪ್‌ ಮಹಿಳೆಯರಿಗೂ ಎಲ್ಲಿಲ್ಲದ ನಂಟು.. ಯೂರೋಪ್‌ನ ಬಹುತೇಕ ಮಹಿಳೆಯರು ಈ ಗ್ರಾಮದ ಗಂಡಸರಿಂದ ಗರ್ಭಿಣಿಯರಾಗಲು ಬಯಸುತ್ತಾರಂತೆ.. ಅದಕ್ಕಾಗಿಯೇ ಅವರು ಇಲ್ಲಿಗೆ ಬಂದು ಗರ್ಭಿಣಿಯರಾಗಿ ವಾಪಸ್‌ ಅವರ ದೇಶಕ್ಕೆ ಹೋಗುತ್ತಾರಂತೆ..
ಬ್ರೋಕ್ಪಾ ಎಂಬ ಬುಡಕಟ್ಟು ಜನಾಂಗದವರು ಇಲ್ಲಿ ವಾಸಿಸುತ್ತಿದ್ದಾರೆ.. ಇವರೆಲ್ಲಾ ಕೂಡಾ ಅಲೆಕ್ಸಾಂಡರ್ ದಿ ಗ್ರೇಟ್ ಸೈನ್ಯದ ವಂಶಸ್ಥರಂತೆ.. ಅಲೆಕ್ಸಾಂಡರ್ ದಿ ಗ್ರೇಟ್ ಭಾರತ ಬಿಟ್ಟುಹೋದಾಗ ಆತನ ಕೆಲ ಸೈನಿಕರು ಭಾರತದಲ್ಲೇ ಉಳಿದಿದ್ದರು. ಜೊತೆಗೆ ಅವರ ವಶಂಸ್ಥರು ಕೂಡಾ ಒಂದಷ್ಟು ಮಂದಿ ಇಲ್ಲೇ ಇದ್ದಾರಂತೆ.. ಇವರು ಉತ್ತಮ ಮೈಕಟ್ಟು ಹೊಂದಿರುತ್ತಾರೆ.. ಹೀಗಾಗಿ ಇಲ್ಲಿನ ಪುರುಷರಿಂದ ಗರ್ಭ ಧರಿಸಿದರೆ ಮಕ್ಕಳು ದಷ್ಟಪುಷ್ಠವಾಗಿ ಹುಟ್ಟುತ್ತಾರೆ ಎಂಬ ನಂಬಿಕೆ ಇದೆಯಂತೆ.. ಇದೇ ಕಾರಣಕ್ಕೆ ಯುರೋಪಿನ ಹಲವಾರು ಮಹಿಳೆಯರು ಇಲ್ಲಿಗೆ ಬರುತ್ತಾರೆ. ಪುರುಷರಿಗೆ ಈ ಮಹಿಳೆಯರು ಗರ್ಭಿಣಿ ಮಾಡುವುದಕ್ಕಾಗಿ ಹಣವನ್ನೂ ನೀಡುತ್ತಾರಂತೆ.. ಇತ್ತೀಚೆಗೆ ವ್ಯಕ್ತಿಯೊಬ್ಬರು ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹೆಚ್ಚು ವೈರಲ್‌ ಆಗುತ್ತಿದೆ..

Share Post