BusinessEconomy

ಐಫೋನ್‌ ತಯಾರಿಕಾ ಸಂಸ್ಥೆ ಅಧ್ಯಕ್ಷ ರಾಜ್ಯಕ್ಕೆ; ಲಕ್ಷ ಉದ್ಯೋಗ ಸೃಷ್ಟಿ!

ಬೆಂಗಳೂರು; ಐಫೋನ್‌ ತಯಾರಿಕಾ ಸಂಸ್ಥೆ ಫಾಕ್ಸ್‌ಕಾನ್ ನ ತೈವಾನ್ ಮೂಲದ ಹೊನ್ ಹೈ ಟೆಕ್ನಾಲಜಿ ಗ್ರೂಪ್‌ನ ಅಧ್ಯಕ್ಷ ಯಂಗ್ ಲಿಯು ಇಂದು ರಾಯಕ್ಕೆ ಆಗಮಿಸುತ್ತಿದ್ದಾರೆ.. ದೇವನಹಳ್ಳಿ ಬಳಿ ಫಾಕ್ಸ್‌ಕಾನ್‌ ಉತ್ಪಾದನಾ ಘಟಕ ಕಾಮಗಾರಿ ನಡೆಯುತ್ತಿದೆ.. ನಿರ್ಮಾಣ ಹಂತದ ಕಾಮಗಾರಿ ವೀಕ್ಷಿಸಲಿರುವ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ಅವರ ಈ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ..

ಇದನ್ನೂ ಓದಿ; ಆ.17ಕ್ಕೆ ಭೂಮಿಗೆ ಅಪ್ಪಳಿಸುತ್ತಾ ಕ್ಷುದ್ರಗ್ರಹ..?; ತಡೆಯೋ ಪ್ರಯತ್ನ ಯಾಕಿಲ್ಲ..?

ದೇವನಹಳ್ಳಿ ತಾಲ್ಲೂಕಿನ ಕುಂದಾಣ ಎಂಬ ಗ್ರಾಮದಲ್ಲಿ ಫಾಕ್ಸ್‌ಕಾನ್‌ ಸಂಸ್ಥೆಗೆ 300 ಎಕರೆ ಮಂಜೂರು ಮಾಡಲಾಗಿದೆ.. ರೈತರಿಂದ ವಶಪಡಿಸಿಕೊಂಡಿರುವ ಈ ಜಮೀನಿಗೆ ಪರಿಹಾರದ ಹಣವನ್ನು ನೇರವಾಗಿ ಕೋರ್ಟ್‌ನಲ್ಲಿ ಠೇವಣಿ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.. ಯಾಕಂದ್ರೆ ರೈತರು ಭೂಸ್ವಾಧಿನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಭೂಸ್ವಾಧೀನ ವಿಳಂಬವಾಗಿದೆ.. 2023 ಮೇನಲ್ಲಿ Foxconn ಸಂಸ್ಥೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 300 ಕೋಟಿ ರೂಪಾಯಿ ಬೆಲೆಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ಈ ಉತ್ಪಾದನಾ ಘಟಕದಲ್ಲಿ ಈ ಸಂಸ್ಥೆ ಬರೋಬ್ಬರಿ 8,500 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು, ಇದರಿಂದ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋ ಸೃಷ್ಟಿಯಾಗುತ್ತೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; 100 ರೂಪಾಯಿಯಿಂದ ಹೂಡಿಕೆ ಆರಂಭಿಸಿ; ಕೊಟ್ಯಧಿಪತಿಗಳಾಗಿ..!

ಫಾಕ್ಸ್‌ಕಾನ್‌ ಒಟ್ಟು ಮೂರು ಘಟಕಗಳನ್ನು ಸ್ಥಾಪನೆ ಮಾಡಲು ಮುಂದೆ ಬಂದಿದ್ದು, ಮುಖ್ಯಮಂತ್ರಿಯನ್ನು ಭೇಟಿಯಾದ ಸಮಯದಲ್ಲಿ ಈ ಬಗ್ಗೆ ಮತ್ತಷ್ಟು ಚರ್ಚೆಗಳಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..

Share Post