ಮೊಬೈಲ್ ಬದಲು ವಾಟರ್ ಹೀಟರ್ ಕಾಯಲ್ ಕಿವಿಗಿಟ್ಟುಕೊಂಡು ಸಾವು!
ಖಮ್ಮಂ(Telangana); ಮೊಬೈಲ್ ಹೆಚ್ಚು ಯಾವ ಹಂತಕ್ಕೆ ಹೋಗಿದೆ ಅಂದ್ರೆ ಟಾಯ್ಲೆಟ್ ಹೋದಾಗಲೂ ಕೂಡಾ ಮೊಬೈಲ್ ಅನ್ನು ಜೊತೆಗೇ ಕೊಂಡೊಯ್ಯಲಾಗುತ್ತದೆ.. ಕೆಲಸ ಮಾಡುತ್ತಿರುವಾಗಲೂ ಜೊತೆಯಲ್ಲಿ ಮೊಬೈಲ್ ಇರಲೇಬೇಕು ಅನ್ನೋ ಪರಿಸ್ಥಿತಿ.. ಕೆಲವರಂತೂ ಮೊಬೈಲ್ ಹುಚ್ಚಿನಿಂದ ಅಕ್ಕಪಕ್ಕ ಏನು ನಡೀತಿದೆ..? ನಾವು ಏನು ಮಾಡುತ್ತಿದ್ದೇವೆ ಅನ್ನೋದನ್ನೂ ಮರೆತಿರುತ್ತಾರೆ.. ಹಾಗೆ ಮರೆತ ಕಾರಣಕ್ಕಾಗಿಯೇ ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ..
ಇದನ್ನೂ ಓದಿ; 3 ವರ್ಷದಲ್ಲಿ 5 ಮದುವೆಯಾದ ಹುಬ್ಬಳ್ಳಿಯ ಹೆಣ್ಣು!
ತೆಲಂಗಾಣದ ಖಮ್ಮಂನಲ್ಲಿ ಮೊಬೈಲ್ ಕಾರಣದಿಂದಾಗಿ ತನ್ನ ಪ್ರಾಣ ಕಳೆದುಕೊಂಡಿದ್ದಾರೆ.. ಖಮ್ಮಂನ ಹುನಮಾನ್ ದೇವಸ್ಥಾನ ಬಳಿ ವಾಸವಿರುವ ದೊನ್ನೆಪುಡಿ ಮಹೇಶ್ ಎಂಬಾತನೇ ಸಾವನ್ನಪ್ಪಿದ ದುರ್ದೈವಿ.. ಇವರು ನಾಯಿಗೆ ಸ್ನಾನ ಮಾಡಿಸಲು ನೀರು ಬಿಸಿ ಮಾಡಲು ಹೋಗಿದ್ದಾರೆ.. ಬಕೆಟ್‌ಗೆ ನೀರು ತುಂಬಿ, ವಾಟರ್ ಹೀಟರ್ ಕಾಯಲ್ ಆನ್ ಮಾಡಿದ್ದಾರೆ.. ಇದೇ ಸಮಯದಲ್ಲಿ ಯಾವುದೋ ಫೋನ್ ಕರೆ ಬಂದಿದೆ.. ಈ ವೇಳೆ ಮೊಬೈಲ್ ಭುಜ ಹಾಗೂ ಕಿವಿಯ ನಡುವೆ ಇಟ್ಟುಕೊಳ್ಳುವ ಬದಲು ಹೀಟರ್ ಕಾಯಲ್ ಇಟ್ಟುಕೊಂಡಿದ್ದಾನೆ..
ಇದನ್ನೂ ಓದಿ; ಕಾರಿನಲ್ಲಿ ಇಬ್ಬರು ಯುವತಿಯರ ಜೊತೆ ಯುವಕನ ರೊಮ್ಯಾನ್ಸ್!
ಇದರಿಂದಾಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಆಸ್ಪತ್ರೆಗೆ ಬಾಡಿಯನ್ನು ತೆಗೆದುಕೊಂಡು ಹೋಗಲಾಯಿತಾದರೂ ವೈದ್ಯರು ಪರೀಕ್ಷಿಸಿ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ..