BengaluruCrime

ಲಕ್ಷ್ಮೀ ಹಬ್ಬಕ್ಕೆ ಚಿನ್ನ ಕೊಡುತ್ತೇನೆಂದು 5 ಕೋಟಿಗೆ ಪಂಗನಾಮ!

ಆನೇಕಲ್(Anekal); ವರಮಹಾಲಕ್ಷ್ಮೀ ಚಿನ್ನ ಕೊಡುತ್ತೇವೆ ಎಂದು ಹೇಳಿ ಚಿನ್ನದ ಚೀಟಿ ಹಾಕಿಸಿ ನೂರಾರು ಜನರಿಂದ ಕೋಟ್ಯಂತರ ರೂಪಾಯಿ ಕಲೆಕ್ಟ್‌ ಮಾಡಿ ವಂಚಿಸಲಾಗಿದೆ.. ಆನೆಕಲ್‌ ತಾಲ್ಲೂಕಿನ ಕಾಚನಾಯಕಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಹಬ್ಬಕ್ಕೆ ಚಿನ್ನದ ಬರುವ ನಿರೀಕ್ಷೆಯಲ್ಲಿದ್ದವರು ಕಣ್ಣೀರು ಹಾಕುತ್ತಿದ್ದಾರೆ.. ಸುಮಾರು 5 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮುಡಾ ಹಗರಣ; ಸಿಎಂ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು!

ಆನಂದ್‌ ಜುವೆಲರ್ಸ್‌ ಅಂಡ್‌ ಕೇಸರ್‌ ಬ್ಯಾಂಕರ್ಸ್‌ ಎಂಬ ಹೆಸರಿನ ಆಭರಣ ಅಂಗಡಿ ತೆರೆದಿದ್ದ ರಾಜಸ್ಥಾನ ಮೂಲ ಆನಂದ್‌ ಎಂಬಾತನೇ ಈ ಮೋಸ ಮಾಡಿರುವಾತ.. ಹತ್ತು ವರ್ಷದಿಂದ ಇಲ್ಲಿಯೇ ವಾಸವಿದ್ದ ಆರೋಪಿ, ಜನರ ನಂಬಿಕೆ ಗಳಿಸಿದ್ದ.. ಹೀಗಾಗಿ, ಸುತ್ತಮುತ್ತಲ 150ಕ್ಕೂ ಹೆಚ್ಚು ಮಂದಿ ಆತನ ಬಳಿ ಚೀಟಿ ಹಾಕಿದ್ದರು.. ವರಮಹಾಲಕ್ಷ್ಮೀ ಹಬ್ಬಕ್ಕೆ ಚಿನ್ನ ಕೊಡುತ್ತೇನೆ ಎಂದು ಆತ ಹೇಳಿದ್ದ..
ಆದ್ರೆ ಹಬ್ಬಕ್ಕೆ ಹತ್ತಿರಕ್ಕೆ ಬರುತ್ತಿದ್ದಂತೆ ಆರೋಪಿ ಅಂಗಡಿ ಹಾಗೂ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾನೆ.. ಇದರಿಂದ ಆತಂಕಗೊಂಡ ಜನರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.. ಪೊಲಿಸರು ಆರೋಪಿಗಾಗಿ ತಲಾಶ್‌ ನಡೆಸಿದ್ದಾರೆ..

ಇದನ್ನೂ ಓದಿ; 3 ವರ್ಷದಲ್ಲಿ 5 ಮದುವೆಯಾದ ಹುಬ್ಬಳ್ಳಿಯ ಹೆಣ್ಣು!

Share Post