CrimeNational

ಮಾಜಿ ಶಾಸಕರ ಮನೆ ಆವರಣದಲ್ಲಿ ಸ್ಫೋಟ; ಮಾಜಿ ಶಾಸಕರ ಪತ್ನಿ ದುರ್ಮರಣ!

ಮಣಿಪುರ; ಮಾಜಿ ಶಾಸಕರೊಬ್ಬರ ಮನೆಯ ಹೊರಗೆ ಭಾರೀ ಸ್ಫೋಟ ಸಂಭವಿಸಿದ್ದು, ಮಾಜಿ ಶಾಸಕರ ಪತ್ನಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.. ಮಣಿಪುರದ ಮಾಜಿ ಶಾಸಕ ಯಾಮ್‌ ಥಾಂಗ್‌ ಮನೆಯ ಆವರಣದಲ್ಲಿ ಈ ಸ್ಫೋಟ ಸಂಭವಿಸಿದೆ.. ಅವರ ಪತ್ನಿ ಸಪಂ ಚಾರುಬಾಲಾ ಸಾವನ್ನಪ್ಪಿದ್ದಾರೆ..

ಇದನ್ನೂ ಓದಿ; ಕಾಫಿ ಶಾಪ್‌ ಟಾಯ್ಲೆಟ್‌ನಲ್ಲಿ ಕ್ಯಾಮರಾ!; ಆರೋಪಿ ಯಾರು ಗೊತ್ತಾ..?

ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿರುವ ಏಕೌ ಮುಲ್ಲಾಮ್ ಗ್ರಾಮದ ಸಾಯಿಕುಲ್‌ನ ತಮ್ಮ ಮನೆಯ ಆವರಣದಲ್ಲಿ ಶುಚಿಗೊಳಿಸಲಾಗುತ್ತಿತ್ತು. ಮಾಜಿ ಶಾಸಕರ ಪತ್ನಿ ಹಾಗೂ ಇತರ ಮನೆಯ ಸದಸ್ಯರು ಈ ಕಾರ್ಯದಲ್ಲಿ ತೊಡಗಿದ್ದರು.. ಈ ವೇಳೆ ಸ್ಫೋಟ ನಡೆದಿದೆ.. ಇದರಿಂದಾಗಿ ಮಾಜಿ ಶಾಸಕರ ಪುತ್ರಿ ಸಪಂ ಚಾರುಬಾಲಾ ಅವರು ತೀವ್ರವಾಗಿ ಗಾಯಗೊಂಡಿದ್ದರು.. ಅವನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ..

ಇದನ್ನೂ ಓದಿ; ತುಂಗಭದ್ರಾ ಡ್ಯಾಮ್‌ ಪ್ರಕರಣ; 60 ಟಿಎಂಸಿ ನೀರು ಹೊರಹೋದರಷ್ಟೇ ರಿಪೇರಿ!

ಮನೆಯ ಕಾಂಪೌಂಡ್‌ನಲ್ಲಿ ತ್ಯಾಜ್ಯ ವಸ್ತುಗಳನ್ನು ಸುಡುತ್ತಿದ್ದಾಗ ಅದರಲ್ಲಿ ಬಾಂಬ್‌ ಇದ್ದು ಅದು ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.. ಹಾಕಿಪ್‌ ಅವರ ಮನೆಯ ಆವರಣದಲ್ಲಿ ಬಾಂಬ್‌ ಇಟ್ಟವರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ.. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ..

Share Post