International

ಹೋಟೆಲ್‌ ಕಟ್ಟಡದ ಮೇಲೆ ಉರುಳಿಬಿದ್ದ ಹೆಲಿಕಾಪ್ಟರ್‌!

ಆಸ್ಟ್ರೇಲಿಯಾ; ಹೆಲಿಕಾಪ್ಟರ್‌ ಒಂದು ಬಹುಮಹಡಿ ಹೋಟೆಲ್‌ ಕಟ್ಟಡದ ಮೇಲೆ ಉರುಳಿಬಿದ್ದಿದ್ದು, ಕೆಳಗೆ ಬಿದ್ದ ಕೂಡಲೇ ಬೆಂಕಿ ಹೊತ್ತುಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ.. ದುರ್ಘಟನೆಯಲ್ಲಿ ಪೈಲಟ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.. ಇಂದು ಬೆಳಗಿನಜಾವ 2 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.. ಉತ್ತರ ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಮಾಜಿ ಶಾಸಕರ ಮನೆ ಆವರಣದಲ್ಲಿ ಸ್ಫೋಟ; ಮಾಜಿ ಶಾಸಕರ ಪತ್ನಿ ದುರ್ಮರಣ!

ಎರಡು ಎಂಜಿನ್‌ ಹೊಂದಿದ್ದ ಈ ಹೆಲಿಕಾಪ್ಟರ್‌ ಇದ್ದಕ್ಕಿದ್ದಂತೆ ಹೋಟೆಲ್‌ಗೆ ಡಿಕ್ಕಿ ಹೊಡೆದು ಅದರ ಮೇಲೆ ಪತನವಾಗಿದೆ.. ಇದರಿಂದಾಗಿ ಬೆಂಕಿ ಅನಾಹುತವಾಗಿದೆ.. ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತ ಹೋಟೆಲ್‌ ಸಿಬ್ಬಂದಿ ಹೋಟೆಲ್‌ನಲ್ಲಿದವರನ್ನು ಸ್ಥಳಾಂತರ ಮಾಡಿದರು.. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.. ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ..
ಇದನ್ನೂ ಓದಿ; ಕಾಫಿ ಶಾಪ್‌ ಟಾಯ್ಲೆಟ್‌ನಲ್ಲಿ ಕ್ಯಾಮರಾ!; ಆರೋಪಿ ಯಾರು ಗೊತ್ತಾ..?

 

Share Post