CrimeNational

ವೈದ್ಯೆ ಮೇಲೆ ಅತ್ಯಾಚಾರ ಮಾಡಲು ನೀಲಿ ಚಿತ್ರ ನೋಡಿ ಬಂದಿದ್ದ ಆರೋಪಿ!

ಕೊಲ್ಕತ್ತಾ; ಸರ್ಕಾರಿ ಆಸ್ಪತ್ರೆಯಲ್ಲಿ ಟ್ರೈನಿ ಡಾಕ್ಟರ್‌ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸಿಗುತ್ತಿದೆ.. ಸಿಕ್ಕಿಬಿದ್ದಿರುವ ಆರೋಪಿಗೆ ಬ್ಲ್ಯೂ ಫಿಲಂ ನೋಡುವ ಹವ್ಯಾಸವಿತ್ತು ಎನ್ನಲಾಗಿದೆ.. ವೈದ್ಯೆ ಮೇಲೆ ಅತ್ಯಾಚಾರ ಎಸಗುವ ಮುಂಚೆಯೂ ಆತ ಬ್ಲ್ಯೂ ಫಿಲಂ ನೋಡಿ ಬಂದಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.. ನೀಲಿ ಚಿತ್ರ ನೋಡಿ ಅದರಿಂದ ಉತ್ತೇಜಿತನಾಗಿದ್ದ ಆರೋಪಿ, ವೈದ್ಯ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಹತ್ಯೆ ಮಾಡಿದ್ದಾನೆ..

ಇದನ್ನೂ ಓದಿ; ಕಾಫಿ ಶಾಪ್‌ ಟಾಯ್ಲೆಟ್‌ನಲ್ಲಿ ಕ್ಯಾಮರಾ!; ಆರೋಪಿ ಯಾರು ಗೊತ್ತಾ..?

ಸ್ವಯಂಸೇವಕನಾಗಿ ಗುರುತಿಸಿಕೊಂಡಿದ್ದ ಸಂಜಯ್‌ ರಾಯ್‌ ಬಂಧಿತ ಆರೋಪಿಯಾಗಿದ್ದಾನೆ.. ಈತ ಸ್ವಯಂಸೇವಕನಾಗಿದ್ದರಿಂದ ಆಸ್ಪತ್ರೆಯಲ್ಲಿ ಎಲ್ಲಾ ಕಡೆ ಓಡಾಡುವುದಕ್ಕೆ ಯಾವುದೇ ಅಭ್ಯಂತರವಿರಲಿಲ್ಲ.. ಮೊದಲಿನಿಂದಲೂ ಆಸ್ಪತ್ರೆಗೆ ಬಂದು ಹೋಗುತ್ತಿದ್ದ ಆತನನ್ನು ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ.. ಆತನ ಬಗ್ಗೆ ಸಂಶಯ ಕೂಡಾ ಇರಲಿಲ್ಲ.. ಹೀಗಾಗಿ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಆತ ಆಸ್ಪತ್ರೆ ಒಳಗೆ ಹೋದರೂ ಯಾರೂ ಏನೂ ಮಾತನಾಡಿಲ್ಲ..

ಇದನ್ನೂ ಓದಿ; ರಾಜ್ಯದ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ..?; Full Deatails

ಸಿಸಿಟಿವಿಯಲ್ಲಿ ದೃಶ್ಯದಲ್ಲಿ ಆರೋಪಿ ಆಸ್ಪತ್ರೆ ಒಳಗೆ ಹೋಗುವಾಗ ಕಿವಿಯಲ್ಲೊ ಬ್ಲ್ಯೂಟೂತ್‌ ಇತ್ತು.. ಹೊರಗೆ ಬರುವಾಗ ಇರಲಿಲ್ಲ.. ಇನ್ನು ಘಟನೆ ಸ್ಥಳದಲ್ಲಿ ಬ್ಲ್ಯೂಟೂತ್‌ ಸಿಕ್ಕಿತ್ತು.. ಈ ಹಿನ್ನೆಲೆಯಲ್ಲಿ ಆರೋಪಿ ಸುಲಭವಾಗಿ ಸಿಕ್ಕಿಬಿದ್ದಿದ್ದಾನೆ.. ಆರೋಪಿಯ ಮೊಬೈಲ್‌ ಚೆಕ್‌ ಮಾಡಿದಾಗ ನೀಲಿ ಚಿತ್ರಗಳ ರಾಶಿಯೇ ಅದರಲ್ಲಿತ್ತು ಎಂದು ತಿಳಿದುಬಂದಿದೆ..

 

Share Post