LifestyleNational

ಇಂತಹ ಸ್ನೇಹಿತರನ್ನು ಎಂದಿಗೂ ಜೊತೆಗಿಟ್ಟುಕೊಳ್ಳಬೇಡಿ; ಇವರು ಎಂದಿಗೂ ಡೇಂಜರ್‌!

ಬೆಂಗಳೂರು; ಸ್ನೇಹ ಎಂದರೆ ಒಬ್ಬರಿಗೊಬ್ಬರು ಸಹಾಯವಾಗಿ ನಿಲ್ಲೋದು.. ಏನೇ ಕಷ್ಟ ಬಂದರೂ ಹೆಗಲಿಗೆ ಹೆಗಲು ಕೊಡೋದು.. ಆದ್ರೆ ಸ್ನೇಹಿತರಾಗಿಯೇ ಇದ್ದು ಕೆಲವರು ಬೆನ್ನಿಗೆ ಚೂರಿ ಹಾಕುವವರಿದ್ದಾರೆ.. ಹೀಗಾಗಿ ಅಂತಹ ಸ್ನೇಹಿತರನ್ನು ಗುರುತಿಸಿ ದೂರ ಇಡಬೇಕೆಂದು ಖ್ಯಾತ ಲೇಖಕ ಯಂಡಮೂರಿ ವೀರೇಂದ್ರ ನಾಥ್‌ ಹೇಳುತ್ತಾರೆ.. ಸ್ನೇಹಿತರ ಒಂದಷ್ಟು ಗುಣ ಲಕ್ಷಣಗಳನ್ನು ಪಟ್ಟಿ ಮಾಡಿರುವ ಅವರು ಅಂತಹ ಲಕ್ಷಣ ಇರುವವರನ್ನು ತಕ್ಷಣ ದೂರ ಇಡುವುದು ಒಳ್ಳೆಯದು ಅನ್ನೋದು ಅಭಿಪ್ರಾಯ. ಹಾಗಾದ್ರೆ, ಎಂಥಾ ಕ್ಯಾರೆಕ್ಟರ್‌ ಇರುವ ಸ್ನೇಹಿತರನ್ನು ದೂರ ಇಡಬೇಕು ಅನ್ನೋದನ್ನು ನೋಡೋಣ ಬನ್ನಿ..
ಅನವಶ್ಯಕ ಸಲಹೆ ನೀಡುವ ಸ್ನೇಹಿತರು ಬೇಡವೇ ಬೇಡ;
ಯಾರೇ ಆಗಲೀ ಸಲಹೆ ಕೇಳಿದರೆ ಕೊಡಬೇಕು.. ಆದ್ರೆ ಕೆಲವು ಸ್ನೇಹಿತರಿರುತ್ತಾರೆ.. ಅನಗತ್ಯವಾಗಿ ಏನೋ ಒಂದು ಸಲಹೆ ಕೊಡುತ್ತಲೇ ಇರುತ್ತಾರೆ.. ಒಂದು ವ್ಯಾಪಾರ ಮಾಡ್ತೀನಿ ಅಂದ್ರೆ ಅದಕ್ಕೆ ಬೇರೇನೋ ಸಲಹೆ ಕೊಡೋದು, ಅನಗತ್ಯವಾಗಿ ಅದು ಮಾಡು, ಇದು ಮಾಡು ಅನ್ನೋದು.. ನಮಗೆ ಇಷ್ಟವಿಲ್ಲದಿದ್ದರೂ ಇಂತಹದ್ದನ್ನು ಮಾಡು ಅಂತ ಪದೇ ಪದೇ ಸಲಹೆ ಕೊಡುವ ಸ್ನೇಹಿತರನ್ನು ದೂರ ಇಡೋದು ಒಳ್ಳೆಯದು.. ಅವರನ್ನು ಹತ್ತಿರ ಇಟ್ಟುಕೊಂಡಷ್ಟೂ ನಮಗೇ ಲಾಸ್‌, ಜೊತೆಗೆ ಸಮಸ್ಯೆ ಕೂಡಾ..
ಪದೇ ಪದೇ ಲೇವಡಿ ಮಾಡುವ ಸ್ನೇಹಿತರು;
ಸ್ನೇಹಿತರೆಲ್ಲಾ ಒಂದು ಕಡೆ ಸೇರಿದಾಗ ಸೇರಿದವರಲ್ಲಿ ಯಾರನ್ನಾದರೂ ಒಬ್ಬರನ್ನು ಆಡಿಕೊಳ್ಳುವುದು. ಅವರನ್ನು ಸುಮ್ಮನೆ ಅವಮಾನಿಸುವುದು, ಯಾವಾಗಲೋ ಮಾಡಿದ ತಪ್ಪನ್ನು ನೆನಪಿಸಿ ಲೇವಡಿ ಮಾಡುವುದು ಮಾಡುತ್ತಿರುತ್ತಾರೆ.. ನಿಮಗೂ ಹಾಗೆ ಮಾಡುವ ಸ್ನೇಹಿತರಿದ್ದರೆ ಅವನ್ನು ಈಗಿನಿಂದಲೇ ದೂರ ಇಟ್ಟುಬಿಡಿ.. ಸ್ನೇಹಿತ ಅಂದರೆ ನಿಮ್ಮ ಘನತೆ ಕಾಪಾಡುವವನು.. ಅವಮಾನಿಸುವವನು ಎಂದಿಗೂ ಸ್ನೇಹಿತನಾಗಲಾರ ಅನ್ನೋದನ್ನು ನೆನಪಿಟ್ಟುಕೊಳ್ಳಿ.
ಮಾತು ಕೊಟ್ಟು ನಡೆದುಕೊಳ್ಳದವನು;
ಕೆಲವು ಸ್ನೇಹಿತರಿರುತ್ತಾರೆ, ನಾನು ಅದನ್ನು ಮಾಡುತ್ತೇನೆ, ಇದನ್ನು ಮಾಡುತ್ತೇನೆ ಎಂದು ಮಾತು ಕೊಡುತ್ತಾರೆ.. ಆದ್ರೆ ಅದನ್ನು ಪಾಲಿಸೋದೇ ಇಲ್ಲ.. ಸಾಲ ತೀರಿಸುತ್ತೇವೆ ಎಂದು ಹೇಳಿರುತ್ತಾರೆ. ಆದ್ರೆ ಕೊಟ್ಟ ಮಾತು ಉಳಿಸಿಕೊಳ್ಳೋದಿಲ್ಲ.. ಕಷ್ಟಕ್ಕೆ ನೆರವಾಗುತ್ತೇವೆ ಎಂದು ಪ್ರಾಮಿಸ್‌ ಮಾಡಿರುತ್ತಾರೆ.. ಆದ್ರೆ ಸಮಯ ಹತ್ತಿರಕ್ಕೆ ಬಂದಾಗ ಏನೋ ಒಂದು ಹೇಳಿ ಎಸ್ಕೇಪ್‌ ಆಗಿರುತ್ತಾರೆ.. ಹೀಗೆ ಮಾಡುವ ಸ್ನೇಹಿತರು ನಿಮ್ಮ ಸುತ್ತ ತುಂಬಾ ಜನ ಇರುತ್ತಾರೆ.. ಆ ರೀತಿ ಮಾತು ಕೊಟ್ಟು ಕೊನೇ ಕ್ಷಣದಲ್ಲಿ ಅವರು ಕೈಕೊಡುವುದರಿಂದ ನಿಮಗೆ ದೊಡ್ಡ ಸಮಸ್ಯೆ ಆಗುತ್ತಿರುತ್ತದೆ… ಸ್ನೇಹಿತ ಬಿಡು ಅಂತ ಹಾಗೆಯೇ ಬಿಟ್ಟರೆ ನಿಮಗೇ ತೊಂದರೆ.. ಹೀಗಾಗಿ ಅಂತಹ ಸ್ನೇಹಿತರು ಎಷ್ಟರಲ್ಲಿ ಇಟ್ಟಿರಬೇಕೋ ಅಷ್ಟರಲ್ಲಿ ಇಡಿ..
ನಿಮ್ಮ ಮೇಲೆ ಡಾಮಿನೇಟ್‌ ಮಾಡುವವರು;
ಸ್ನೇಹಿತರು ಅಂದ ಮೇಲೆ ಶ್ರೀಮಂತನೋ, ಬಡವನೋ ಸಮನಾಗಿ ನೋಡಬೇಕು.. ಆದ್ರೆ ಕೆಲವರಿರುತ್ತಾರೆ ಮಾತು ಮಾತಿಗೂ ನಿಮ್ಮನ್ನು ವಿಮರ್ಶೆ ಮಾಡುತ್ತಿರುತ್ತಾರೆ.. ನಿಮ್ಮನ್ನು ಡಾಮಿನೇಟ್‌ ಮಾಡಲು ಹೋಗುತ್ತಾರೆ.. ನಾನು ಹೇಳಿದಂತೆ ಮಾಡಬೇಕು ಎಂದು ಬಯಸುವವರೂ ಇರುತ್ತಾರೆ.. ಗುಲಾಮರಂತೆ ಕಾಣುತ್ತಾರೆ.. ಅಂತಹವರ ಸ್ನೇಹವನ್ನು ಇಲ್ಲಿಗೇ ಬಿಡುವುದು ಒಳ್ಳೆಯದು.. ಇಂತಹವರ ಜೊತೆ ನೀವಿದ್ದರೆ ಎಂದಿಗೂ ಅವರ ಗುಲಾಮರಾಗಿಯೇ ಇರಬೇಕಾಗುತ್ತದೆ..
ಅವರ ಅಭಿರುಚಿಗಳನ್ನು ನಿಮ್ಮ ಮೇಲೆ ಪ್ರಯೋಗ;
ಒಬ್ಬೊಬ್ಬರಿಗೆ ಒಂದೊಂದು ಅಭಿರುಚಿ ಇರುತ್ತೆ.. ಒಬ್ಬರಿಗೆ ಟೀ ಕುಡಿಯೋ ಅಭ್ಯಾಸ ಇದ್ದರೆ, ಮತ್ತೊಬ್ಬರಿಗೆ ಕಾಫಿ ಕುಡಿಯೋದು ಇಷ್ಟವಾಗಿರುತ್ತದೆ.. ಆದ್ರೆ ಕೆಲವು ಸ್ನೇಹಿತರು ತಮ್ಮ ಅಭಿರುಚಿಗಳನ್ನು ಇನ್ನೊಬ್ಬ ಮೇಲೆ ಹೇರಲು ಹೋಗುತ್ತಾರೆ.. ನನಗೆ ಅದಂದ್ರೆ ತುಂಬಾ ಇಷ್ಟ.. ನೀವೂ ಅದನ್ನೇ ತಿನ್ನಿ ಅನ್ನೋದು.. ನನಗೆ ವಿಸ್ಕಿ ಅಂದ್ರೆ ಇಷ್ಟ ನೀನೂ ಅದನ್ನೇ ಕುಡಿ. ವಿಸ್ಕಿ ಕುಡಿಯದ ಜೀವನ ಜೀವನಾನೇ ಅಂತ ಕೇಳೋದು. ಬಲವಂತಾಗಿ ಅವರ ಅಭಿರುಚಿಯನ್ನು ಬೇರೆಯವರ ಮೇಲೆ ಹೇರೋದಕ್ಕೆ ಹೋಗುವವರನ್ನು ಖಂಡಿತವಾಗಿಯೂ ದೂರವಿಡಿ. ಬೇರೆಯವರಿಗಾಗಿ ನಿಮ್ಮ ಇಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕಿಂತ ಅವರನ್ನೇ ದೂರವಿಡುವುದು ಒಳ್ಳೆಯದು..
ಅವರ ಕೆಲಸಕ್ಕೆ ನಿಮ್ಮನ್ನು ಬಳಸಿಕೊಳ್ಳೋದು;
ಒಂದಷ್ಟು ಸ್ನೇಹಿತರಿರುತ್ತಾರೆ.. ಅವರು ತಮ್ಮ ಅವಶ್ಯಕತೆಗಳಿಗೆ ಜೊತೆಗಿದ್ದ ಸ್ನೇಹಿತರನ್ನು ಬಳಸಿಕೊಳ್ಳುತ್ತಿರುತ್ತಾರೆ.. ಎಂದೋ ಒಂದು ದಿನ ಏನೋ ಕೆಲಸ ಮಾಡಿಕೊಟ್ಟಿರುತ್ತೀರಿ ಎಂದಿಟ್ಟುಕೊಳ್ಳೋಣ.. ಅಂತಹ ಕೆಲಸದ ಅನಿವಾರ್ಯತೆ ಮತ್ತೆ ಬಂದಾಗ, ಅವರೇ ಮಾಡುವುದಕ್ಕೆ ಆಗುತ್ತಿದ್ದರೂ ಕೂಡಾ ನಿಮ್ಮಿಂದಲೇ ಆ ಕೆಲಸ ಮಾಡಿಸೋದು.. ಅವರು ಮಜಾ ಮಾಡ್ತಾ ಇರೋದು, ಅವರ ಕೆಲಸಗಳನ್ನು ನಿಮ್ಮ ಕೈಯಲ್ಲಿ ಮಾಡಿಸೋದು.. ಯಾರದೋ ವಿರುದ್ಧ ತಾವು ಮಾತನಾಡದೇ ನಿಮ್ಮ ಬಳಿ ಮಾತನಾಡಿಸೋದು ಹೀಗೆ ಹೇಗೇಗೋ ನಿಮ್ಮನ್ನು ಬಳಸಿಕೊಳ್ಳುತ್ತಿರುತ್ತಾರೆ.. ಅದು ನಿಮಗೆ ಗೊತ್ತಾಗದಿರಲಿ ಅಂತ ಸುಮ್ಮನೆ ನಿಮ್ಮನ್ನು ಹೊಗಳುತ್ತಿರುತ್ತಾರೆ.. ಇಂತಹ ಸ್ನೇಹಿತರನ್ನು ಖಂಡಿತವಾಗಿಯೂ ದೂರವಿಡುವುದು ಒಳ್ಳೆಯದು..

Share Post