CrimeNational

14 ತಿಂಗಳಲ್ಲಿ 9 ಮಹಿಳೆಯರ ಕೊಲೆ!; ಸೀರಿಯಲ್‌ ಕಿಲ್ಲರ್ಸ್‌ ಇವರೇನಾ..?

ಬರೇಲಿ (ಉತ್ತರಪ್ರದೇಶ); ಒಂದೇ ಪ್ರದೇಶದಲ್ಲಿ ಕೊಲೆಗಳು ನಡೆಯುತ್ತಿದ್ದವು.. ಹೊಲಗಳಲ್ಲಿ ಕೆಲಸ ಮಾಡುವ ಮಹಿಳೆಯರೇ ಅವರು ಟಾರ್ಗೆಟ್‌ ಆಗುತ್ತಿದ್ದರು.. ಕೊಲೆಗಳು ಒಂದೇ ರೀತಿ ನಡೆಯುತ್ತಿದ್ದವು.. ಕಳೆದ 14 ತಿಂಗಳಲ್ಲಿ ಅಲ್ಲಿ ನಡೆದದ್ದು 9 ಮಹಿಳೆಯರ ಕಗ್ಗೊಲೆ.. 45 ರಿಂದ 55 ವರ್ಷದ ಮಹಿಳೆಯರು ಹೊಲದಲ್ಲಿ ಕೆಲಸ ಮಾಡುವಾಗ ಮಧ್ಯಾಹ್ನದ ಸಮಯಕ್ಕೆ ಎಂಟ್ರಿ ಕೊಡುತ್ತಿದ್ದ ಗುಂಪು ಕತ್ತು ಹಿಸುಕಿ ಕೊಲೆ ಮಾಡುತ್ತಿತ್ತು.. ನಂತರ ಅವರ ಮೈಮೇಲಿದ್ದ ಆಭರಣಗಳನ್ನು ಕದ್ದು ಪರಾರಿಯಾಗುತ್ತಿತ್ತು.. ಉತ್ತರ ಪ್ರದೇಶದ ಬರೇಲಿ ಸುತ್ತಮುತ್ತ ನಡೆಯುತ್ತಿದ್ದ ಈ ಪ್ರಕರಣಗಳು ಪೊಲೀಸರಿಗೆ ತೀವ್ರ ತಲೆನೋವು ತರಿಸಿತ್ತು.. ಕೊನೆಗೂ ಮೂವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ..

ಇದನ್ನೂ ಓದಿ; ದರ್ಶನ್‌ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ!

25 ಕಿಲೋ ಮೀಟರ್‌ ವ್ಯಾಪ್ತಿಯಲ್ಲೇ ಈ ಕೊಲೆಗಳೆಲ್ಲಾ ನಡೆದಿದ್ದವು.. ಜೊತೆ ಆಭರಣಗಳನ್ನು ದೋಚುವ ಉದ್ದೇಶದಿಂದಲೇ ಈ ಕೊಲೆಗಳು ನಡೆದಿದ್ದವು ಎಂದು ಸಾಬೀತಾಗಿತ್ತು.. ಹೀಗಾಗಿ ಒಂದೇ ಗುಂಪು ಈ ಕೆಲಸ ಮಾಡುತ್ತಿರಬಹುದು ಎಂದು ಪೊಲೀಸರು ಅಂದಾಜಿಸಿದ್ದರು.. ಇದರ ಆಧಾರದ ಮೇಲೆ ತನಿಖೆ ಕೈಗೊಂಡಿದ್ದರು.. ಸೀರಿಯಲ್‌ ಕಿಲ್ಲರ್ಸ್‌ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ..

ಇದನ್ನೂ ಓದಿ; ಟಿಪ್ಪರ್‌ ಲಾರಿ ಡಿಕ್ಕಿ; ಗರ್ಭಿಣಿ ಹೊಟ್ಟೆಯಿಂದ ಹೊರಬಂದ ಮಗು!

Share Post