LifestyleNational

ಬಾಲ್ಯ ಸ್ನೇಹಿತನ ಜೊತೆ ಪತ್ನಿಗೆ ಮದುವೆ ಮಾಡಿಸಿದ ಪತಿ!

ಬಿಹಾರ; ವ್ಯಕ್ತಿಯೊಬ್ಬನಿಗೆ ತನ್ನ ಹೆಂಡತಿ ತನ್ನ ಬಾಲ್ಯದ ಸ್ನೇಹಿತನನ್ನು ಪ್ರೀತಿಸುತ್ತಿರುವ ವಿಷಯ ಗೊತ್ತಾಗುತ್ತದೆ.. ಇದರಿಂದ ಆತ ಆಕ್ರೋಶಗೊಳ್ಳಬೇಕಿತ್ತು.. ಆದ್ರೆ, ಇಲ್ಲಿ ಆ ವ್ಯಕ್ತಿ ತನ್ನ ಪತ್ನಿಯನ್ನು ಆಕೆಯ ಇಚ್ಛೆಯಂತೆ ಬಾಲ್ಯದ ಸ್ನೇಹಿತನಿಗೆ ಕೊಟ್ಟು ಮದುವೆ ಮಾಡಿಸಿದ್ದಾನೆ.. ಜೊತೆಗೆ ತನ್ನ ಎರಡು ವರ್ಷದ ಮಗುವನ್ನು ಸಾಕಿ, ಬೆಳೆಸುವ ಜವಾಬ್ದಾರಿಯನ್ನು ಆತನೇ ಹೊತ್ತುಕೊಂಡಿದ್ದಾನೆ.. ಈ ಘಟನೆ ಬಿಹಾರದ ಲಖಿಸರೈನಲ್ಲಿ ನಡೆದಿದೆ..

ಇದನ್ನೂ ಓದಿ; ಕಿಡ್ನಿ ಸಮಸ್ಯೆ ಇದ್ದರೆ ಮೊದಲೇ ತಿಳಿಯವುದು ಹೇಗೆ..?

ಅಂಹರಾ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಮನರದ ಖುಷ್ಬೂಳನ್ನು ರಾಜೇಶ್‌ ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಈಗ ಎರಡು ವರ್ಷದ ಮಗು ಕೂಡಾ ಇದೆ.. ಹೀಗಿದ್ದರೂ ಕೂಡಾ ಖುಷ್ಬೂ ತನ್ನ ಬಾಲ್ಯದ ಗೆಳೆಯನ ಜೊತೆ ಸಂಪರ್ಕ ಇಟ್ಟುಕೊಂಡಿದ್ದಳು.. ಬಾಲ್ಯದ ಗೆಳೆ ಚಂದನ್‌ ಆಗಾಗ ಖಷ್ಬೂ ಮನೆಗೆ ಬಂದು ಹೋಗುತ್ತಿದ್ದ.. ಜುಲೈ 30 ರಂದು ಕೂಡಾ ಚಂದನ್‌ ಅಲ್ಲಿಗೆ ಬಂದಿದ್ದ.. ಈ ವೇಳೆ ಕುಟುಂಬಸ್ಥರಿಗೆ ಇಬ್ಬರೂ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು..

ಇದನ್ನೂ ಓದಿ; ಮೈಸೂರಿಗೆ ಬಿಜೆಪಿ ಪಾದಯಾತ್ರೆ; ಷರತ್ತಿಗೆ ಒಪ್ಪಿದರೆ ಮಾತ್ರ ಜೆಡಿಎಸ್‌ ಭಾಗಿ!

ಈ ವೇಳೆ ಗಂಡ ರಾಜೇಶ್‌ ಒಂದು ತೀರ್ಮಾನಕ್ಕೆ ಬರುತ್ತಾನೆ.. ಪ್ರಿಯಕರ ಚಂದನ್‌ಗೆ ತನ್ನ ಹೆಂಡತಿಯನ್ನು ಕೊಟ್ಟು ಮದುವೆ ಮಾಡುತ್ತಾರೆ.. ಚಂದನ್‌ ಕೂಡಾ ಖುಷಿಯಾಗಿ ಖುಷ್ಬೂಳನ್ನು ವರಿಸಿದ್ದಾನೆ.. ಆಕೆಯನ್ನು ಸುಖವಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ..

Share Post