CrimeNational

ಹೆಂಡತಿಗೆ ಮೂರು ಮದುವೆ ಮಾಡಿಸಿದ್ದ ಗಂಡ..!; ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ!

ಮಧ್ಯಪ್ರದೇಶ; ಗಂಡಸರು ಹಲವಾರು ಮದುವೆಯಾಗೋದನ್ನು ನೋಡಿದ್ದೇವೆ.. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಇಬ್ಬರು ಪತ್ನಿಯರು ಮುಂದೆ ನಿಂತು ತನ್ನ ಗಂಡನಿಗೆ ಮೂರನೇ ಮದುವೆ ಮಾಡಿಸಿದ್ದರು.. ಆದ್ರೆ ಈ ಸ್ಟೋರಿ ರಿವರ್ಸ್‌… ಯಾಕಂದ್ರೆ ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಮೂರು ಮದುವೆ ಮಾಡಿಸಿದ್ದಾನೆ.. ಆದ್ರೆ, ಕಳ್ಳತನ ಮಾಡೋದಕ್ಕಾಗಿ ಗಂಡ-ಹೆಂಡತಿ ಹಿಡಿದ ಅಡ್ಡದಾರಿ..

ಇದನ್ನೂ ಓದಿ; ಚಲಿಸುತ್ತಿದ್ದ ರೈಲಿನ ಎದುರೇ ಕುಸಿದ ಗುಡ್ಡ!; ಹಳಿ ತಪ್ಪಿದ ರೈಲು!

ಹೌದು, ಮಧ್ಯಪ್ರದೇಶದ ಖರ್ಗೋನ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.. ವ್ಯಕ್ತಿಯೊಬ್ಬ ಮ್ಯಾರೇಜ್‌ ಬ್ರೋಕರ್‌ ರೀತಿ ಎಲ್ಲರನ್ನೂ ಪರಿಚಯಿಸಿಕೊಳ್ಳುತ್ತಾನೆ.. ವಯಸ್ಸಾದವರು ವಧು ಹುಡುಕುತ್ತಿದ್ದರೆ, ಅವರಿಗೆ ತನ್ನ ಪತ್ನಿಯನ್ನೇ ತೋರಿಸುತ್ತಾನೆ.. ಆದ್ರೆ ಆಕೆ ತನ್ನ ಪತ್ನಿ ಅಂತ ಹೇಳದೆ ಮರೆಮಾಚುತ್ತಾನೆ.. ಆಕೆಯನ್ನು ಒಪ್ಪಿದರೆ ಅವರಿಗೆ ಕೊಟ್ಟು ಗಂಡನೇ ಮದುವೆ ಮಾಡಿಸುತ್ತಾನೆ.. ಹೊಸ ಗಂಡನ ಮನೆಗೆ ಹೋಗುವ ಆಕೆ, ಕೆಲ ದಿನ ಚೆನ್ನಾಗಿದ್ದು, ನಂತರ ಮನೆಯಲ್ಲಿರುವ ಹಣ, ಆಭರಣಗಳನ್ನು ದೋಚಿ ಪರಾರಿಯಾಗುತ್ತಾಳೆ.. ನಂತರ ಗಂಡ ಹೆಂಡತಿ ಇಬ್ಬರೂ ಬೇರೆ ಊರಿಗೆ ಬಂದು ಸೆಟ್ಲ್‌ ಆಗುತ್ತಾರೆ.. ಅನಂತರ ಇನ್ನೊಬ್ಬ ಬಕ್ರಾಗಾಗಿ ಹುಡುಕಾಟ ನಡೆಯುತ್ತೆ.. ಹೀಗೆ ವ್ಯಕ್ತಿಯೊಬ್ಬ ಕಳವು ಮಾಡೋದಕ್ಕಾಗಿಯೇ ತನ್ನ ಹೆಂಡತಿಗೆ ಇದುವರೆಗೆ ಮೂರು ಮದುವೆ ಮಾಡಿಸಿದ್ದಾನೆ..

ಇದನ್ನೂ ಓದಿ; 633 ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಾವು..!

ಆದ್ರೆ ಇದು ಎಷ್ಟು ದಿನ ಅಂತ ನಡೆಯುತ್ತೆ..? ಯಾವತ್ತಾದರೂ ಒಂದು ದಿನ ಸಿಕ್ಕಿಹಾಕಿಕೊಳ್ಳಲೇಬೇಕಲ್ಲವೇ..? ಇಲ್ಲಿ ಅದೇ ಆಗಿದೆ.. ಇಬ್ಬರೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.. ವಿಚಾರಣೆ ನಡೆಸಿದಾಗ ಮೂರು ಮದುವೆ ವಿಷಯ ಗೊತ್ತಾಗಿದೆ..

Share Post