BengaluruPolitics

ಮುಡಾ ಹಗರಣ; ಬೆಂಗಳೂರಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಬಿಜೆಪಿ-ಜೆಡಿಎಸ್‌ ಸಿದ್ಧತೆ!

ಬೆಂಗಳೂರು; ಮುಡಾ ಹಗರಣದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸಜ್ಜಾಗುತ್ತಿವೆ.. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಬಿಜೆಪಿ-ಜೆಡಿಎಸ್‌ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.. ಸೋಮವಾರವೇ ಪಾದಯಾತ್ರೆ ಶುರು ಮಾಡುವ ಸಾಧ್ಯತೆ ಇದೆ.. ಭಾನುವಾರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಅಪಾರ್ಟ್‌ಮೆಂಟ್‌ನಲ್ಲಿ 14 ಯುವಕರು, 6 ಯುವತಿಯರು!; ರೇವ್‌ ಪಾರ್ಟಿ ಮಾಡ್ತಿದ್ದವರು ಸಿಕ್ಕಿಬಿದ್ದಿದ್ದು ಹೇಗೆ..?

ಪಾದಯಾತ್ರೆ ಮಾಡಬೇಕಾ ಅಥವಾ ರಾಷ್ಟ್ರಪತಿ ಹಾಗೂ ಕೇಂದ್ರ ಗೃಹಸಚಿವರಿಗೆ ದೂರು ನೀಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.. ಭಾನುವಾರ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಹೇಳಲಾಗುತ್ತಿದೆ.. ಮಾಹಿತಿ ಪ್ರಕಾರ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೋರಾಟಕ್ಕೆ ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಆದ್ರೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ..

ಇದನ್ನೂ ಓದಿ; ತುಪ್ಪ ಅಸಲಿಯೋ, ನಕಲಿಯೋ ಎಂದು ತಿಳಿಯುವುದು ಹೇಗೆ..?

ಇನ್ನೊಂದೆಡೆ ಬಿಜೆಪಿ ಹಾಗೂ ಜೆಡಿಎಸ್‌ ಆರೋಪವನ್ನು ಕಾಂಗ್ರೆಸ್‌ ನಾಯಕರ ಅಲ್ಲಗಳೆಯುತ್ತಿದ್ದಾರೆ.. ಒಂದು ವೇಳೆ ಬಿಜೆಪಿ -ಜೆಡಿಎಸ್‌ ನಾಯಕರು ಪಾದಯಾತ್ರೆ ಶುರು ಮಾಡಿದ್ರೆ ಪ್ರತಿಯಾಗಿ ಮೈಸೂರಿನ ಕಾಂಗ್ರೆಸ್‌ ನಾಯಕರು ಕೂಡಾ ಪಾದಯಾತ್ರೆ ನಡೆಸಲು ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.. ಕಾಂಗ್ರೆಸ್‌ ನಾಯಕರು ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ..

Share Post