ಕಬ್ಜ ಸೆಟ್ಗೆ ಕಿಚ್ಚನ ಎಂಟ್ರಿ
ಬೆಂಗಳೂರು : ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿ ಹಾಕಿರುವ ಕಬ್ಜ ಸಿನಿಮಾದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಈಗ ಕಿಚ್ಚ ಸುದೀಪ್ ಕಬ್ಜ ಸಿನಿಮಾದ ಶೂಟಿಂಗ್ ಅಲ್ಲಿ ಪಾಲ್ಗೊಂಡಿದ್ದಾರೆ.
ಕಿಚ್ಚನನ್ನು ಚಿತ್ರತಂಡ ಸ್ವಾಗತಿಸಿದೆ. ಆರ್ ಚಂದ್ರು ಕಿಚ್ಚ ಸುದೀಪ್ ಅವರಿಗೆ ಸ್ವಾಗತ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಭಾರ್ಗವ ಭಕ್ಷಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುದೀಪ್. ೫ನೇ ಹಂತದ ಶೂಟಿಂಗ್ ನಡೆಸಿರುವ ಚಿತ್ರತಂಡ ಸದ್ಯದಲ್ಲೇ ಸಿನಿಮಾ ಚಿತ್ರೀಕರಣ ಮುಗಿಸುವ ತವಕದಲ್ಲಿದೆ.