ಇದೆಂಥಾ ವಿಚಿತ್ರ..!; ಶ್ರೀಮಂತನಾಗಲು ದುಡಿದಿದ್ದೆಲ್ಲಾ ಉಳಿಸ್ತಿದ್ದಾನಂತೆ ಈ ಜಿಪುಣ ಉದ್ಯೋಗಿ
ಜಪಾನ್; ಸಂಪಾದನೆ ಮಾಡುವ ಹಣ ಉಳಿತಾಯ ಮಾಡಿದರೆ ಭವಿಷ್ಯದಲ್ಲಿ ನಮಗೆ ನೆಮ್ಮದಿ ಕೊಡುತ್ತದೆ.. ತುಂಬಾ ಜನ, ದುಡಿಯುವ ಸಮಯದಲ್ಲಿ ಒಂದಷ್ಟು ಭಾಗವನ್ನು ಉಳಿತಾಯ ಮಾಡುತ್ತಾ ಸುಖ ಜೀವನ ಸಾಗಿಸುತ್ತಿರುತ್ತಾರೆ.. ಇನ್ನೂ ಕೆಲವರು ನಾನು ಜೀವಿತಾವಧಿಯಲ್ಲಿ ಇಷ್ಟು ಸಂಪಾದನೆ ಮಾಡಲೇಬೇಕು ಎಂದು ಪಣ ತೊಟ್ಟಿರುತ್ತಾರೆ.. ಅಂತವರು ವೆಚ್ಚಗಳಿಗೆಲ್ಲಾ ಕಡಿವಾಣ ಹಾಕಿ, ಬಹುತೇಕ ಹಣವನ್ನು ಉಳಿತಾಯ ಮಾಡೋಕೆ ಶುರು ಮಾಡಿರುತ್ತಾರೆ.. ಅಂತಹದ್ದೇ ವ್ಯಕ್ತಿಯ ಕುರಿತ ಸ್ಟೋರಿ ಇದು.. ಜಪಾನ್ನ ವ್ಯಕ್ತಿಯೊಬ್ಬ ಮಿಲಿಯನೇರ್ ಆಗುವುದಕ್ಕಾಗಿ 25 ವರ್ಷಗಳಿಂದ ಕಡು ಜಿಪುಣನಾಗಿ ಜೀವನ ಮಾಡುತ್ತಿದ್ದಾನೆ.. ಆತ ತಿನ್ನುವ ಆಹಾರ, ಕುಡಿಯುವ ಪಾನೀಯದಲ್ಲೂ ರಾಜೀ ಮಾಡಿಕೊಂಡು ಜೀವಿಸುತ್ತಿದ್ದಾನೆ..
ಇದನ್ನೂ ಓದಿ; ಆಗಾಗ ಜ್ವರ ಬರೋದು ಒಳ್ಳೆಯದಂತೆ..!; ಮಾರಕ ಕಾಯಿಲೆಗಳು ಬರದಂತೆ ತಡೆಯುತ್ತಂತೆ!
ಜಪಾನ್ನ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದೆ.. ಆದ್ರೆ ಆ ವ್ಯಕ್ತಿಯ ಹೆಸರು ಮಾತ್ರ ಬಹಿರಂಗ ಮಾಡಿಲ್ಲ.. ಆ ವ್ಯಕ್ತಿಯ ವಯಸ್ಸು ಈಗ 45 ವರ್ಷ ಎಂದು ತಿಳಿದುಬಂದಿದೆ.. ಆತ ಬೇಗ ಉದ್ಯೋಗದಿಂದ ನಿವೃತ್ತಿ ಹೊಂದಿ, ಮುಂದಿನ ಜೀವನವನ್ನು ಸುಖವಾಗಿ ಕಳೆಯೋದಕ್ಕೆ ತೀರ್ಮಾನ ಮಾಡಿದ್ದಾನೆ.. ಹೀಗಾಗಿ ಉದ್ಯೋಗ ಮಾಡುವ ಸಮಯದಲ್ಲಿ ಬಹುತೇಕ ಹಣವನ್ನು ಉಳಿತಾಯ ಮಾಡಲು ತೀರ್ಮಾನಿಸಿದ್ದಾರೆ.. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಈ ಬಗ್ಗೆ ವರದಿ ಮಾಡಿದೆ.. ಜಪಾನ್ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಈ ಉದ್ಯೋಗಿ 2000ರಲ್ಲಿ ತುಂಬಾ ಕಷ್ಟಪಟ್ಟು ಈ ಕೆಲಸ ಸಂಪಾದಿಸಿದ್ದಾನೆ.. ಅಂದಿನಿಂದ ಹೇಗಾದರೂ ಮಾಡಿ ಹೆಚ್ಚಿನ ಹಣ ಉಳಿತಾಯ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾನೆ.. ಅವನ ಈ ತೀರ್ಮಾನಕ್ಕೆ ಕಾರಣ ಉದ್ಯೋಗಿಗಳ ಮೇಲೆ ಕಂಪನಿಯವರು ಹಾಕುತ್ತಿರುವ ಹೆಚ್ಚಿನ ಒತ್ತಡ.. ಒತ್ತಡದಿಂದ ಯಾಕೆ ಜೀವನ ಮಾಡಬೇಕು, ಬೇಗ ನಿವೃತ್ತಿ ಹೊಂದಿ ಸುಖವಾಗಿ ಬಾಳೋಣ ಅಂತ ಆತ ತೀರ್ಮಾನ ಮಾಡಿದ್ದಾರೆ..
ಇದನ್ನೂ ಓದಿ; ಕಿರಿಯ ವಿದ್ಯಾರ್ಥಿಗಳನ್ನು ಕೂಡಿಹಾಕಿ ದೊಣ್ಣೆಗಳಿಂದ ತೀವ್ರ ಹಲ್ಲೆ!
ಈತ 20 ವರ್ಷಗಳಿಂದ ಕಂಪನಿ ಹಾಸ್ಟೆಲ್ನಲ್ಲೇ ಜೀವನ!;
ಈ ಜಿಪುಣ ಉದ್ಯೋಗಿಯ ವಾರ್ಷಿಕ ಆದಾಯ 5 ಮಿಲಿಯನ್ ಯೆನ್. ಅಂದರೆ ಸುಮಾರು 27 ಲಕ್ಷ ರೂಪಾಯಿ. ಆ ಆದಷ್ಟು ಬೇಗ 100 ಮಿಲಿಯನ್ ಯೆನ್ಗಳನ್ನು ಉಳಿತಾಯ ಮಾಡಿ, ಬಹುಬೇಗ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಬಯಸುತ್ತಿದ್ದಾನೆ.. ಹೀಗಾಗಿ ಈತ ಉಳಿತಾಯ ಮಾಡೋದಕ್ಕಾಗಿ ತಿನ್ನುವ ಆಹಾರದಲ್ಲೂ ರಾಜಿ ಮಾಡಿಕೊಂಡಿದ್ದಾನೆ.. ಈತ ಯಾವಾಗಲೂ ಉಚಿತವಾಗಿ ಸಿಗುವ ಒಂದು ಕಪ್ ಆಹಾರ, ತರಕಾರಿ ಸಲಾಡ್, ಎನರ್ಜಿ ಡ್ರಿಂಕ್ ಅಷ್ಟೇ ಸೇವಿಸುತ್ತಾನಂತೆ.. ಇನ್ನೂ ಆಸಕ್ತಿಯ ವಿಷಯ ಅಂದ್ರೆ ಈತ ಕಳೆದ 20 ವರ್ಷಗಳಿಂದ ತಾನು ಕೆಲಸ ಮಾಡುವ ಕಂಪನಿಯ ಹಾಸ್ಟೆಲ್ನಲ್ಲೇ ಜೀವನ ಮಾಡುತ್ತಿದ್ದಾನೆ.. ಇದಕ್ಕೆ ಆತ ಪ್ರತಿ ತಿಂಗಳು 30 ಸಾವಿರ ಯೆನ್ ಅಂದರೆ 16 ಸಾವಿರ ರೂಪಾಯಿ ಬಾಡಿಗೆಯಾಗಿ ನೀಡುತ್ತಿದ್ದಾರೆ.. ಫರ್ನಿಚರ್ ಹಾಗೂ ಇತರೆ ಸಾಮಗ್ರಿಗಳನ್ನು ಹಣ ವ್ಯಯಿಸಿ ಖರೀದಿ ಮಾಡದೆ, ಬೇರಯವರಿಂದ ಉಚಿತವಾಗಿ ಸಂಗ್ರಹಿಸಿದ್ದಾನಂತೆ..!
ಏಳು ಕೋಟಿ ರೂಪಾಯಿ ಉಳಿತಾಯ!;
ಈತ ಕೆಲವೊಮ್ಮೆ ಉಚಿತ ಆಹಾರ ಸಿಗದೇ ಇದ್ದರೆ ರಾತ್ರಿ ಊಟಕ್ಕೆ ಬರೀ ಬಿಸ್ಕೆಟ್ಗಳನ್ನು ಮಾತ್ರ ತಿಂದು ಕೋಲಾ ಕುಡಿಯುತ್ತಾನೆ.. ಕೆಲವೊಮ್ಮೆ ಬರೀ ಎನರ್ಜಿ ಡ್ರಿಂಕ್ ಕುಡಿದು ನಿದ್ದೆ ಮಾಡುತ್ತಾನಂತೆ.. ಹಾಗೆ ದುಡಿದ ಬಹುತೇಕ ಹಣನ್ನು ಉಳಿತಾಯ ಮಾಡುತ್ತಿದ್ದಾನೆ.. ಇದುವರೆಗೆ ಆತ 7 ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾನಂತೆ.. ತನ್ನ ಗುರಿ ಮುಟ್ಟಲು ಇನ್ನೂ ಬಾಕಿ ಇದೆ.. ಅದಕ್ಕಾಗಿ ಈ ಜಿಪುಣ ಉದ್ಯೋಗ ಇನ್ನೂ ಹೋರಾಡುತ್ತಲೇ ಇದ್ದಾನೆ..