BengaluruCrime

ಪೊಲೀಸ್‌ ವೇಷದಲ್ಲಿ ವಿಚ್ಛೇದಿತ ಮಹಿಳೆಗೆ ಗಾಳ!; ವ್ಯಕ್ತಿಯಿಂದ 41 ಲಕ್ಷ ರೂ. ದೋಖಾ..!

ನೆಲಮಂಗಲ; ವ್ಯಕ್ತಿಯೊಬ್ಬ ವಿಚ್ಛೇದಿತ ಮಹಿಳೆಗೆ ಪೊಲೀಸ್‌ ಎಂದು ಸುಳ್ಳು ಹೇಳಿ ಮದುವೆಯಾಗುವುದಾಗಿ ನಂಬಿಸಿ ದೋಖಾ ಮಾಡಿದ ಘಟನೆ ನಡೆದಿದೆ.. ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯಿಂದ 41 ಲಕ್ಷ ರೂಪಾಯಿ ಹಣ ಹಾಗೂ 5 ಲಕ್ಷ ರೂಪಾಯಿ ಮೌಲ್ಯದ ಎಲ್‌ಐಸಿ ಬಾಂಡ್‌ ಕಿತ್ತುಕೊಳ್ಳಲಾಗಿದೆ.

ಇದನ್ನೂ ಓದಿ; ಕಳೆದ 3 ತಿಂಗಳಲ್ಲಿ ಅಂಬಾನಿಗೆ ಜಿಯೋ ಸಂಸ್ಥೆಯಿಂದ ಬಂದ ಲಾಭವೆಷ್ಟು ಗೊತ್ತಾ..?

40 ವರ್ಷದ ವಿಚ್ಛೇದಿತ ಮಹಿಳೆಗೆ ಸೋಷಿಯಲ್‌ ಮೀಡಿಯಾದಲ್ಲಿ ಚಿಕ್ಕಬಾಣಾವರದ ವಿಶ್ವನಾಥ್‌ ಅಲಿಯಾಸ್‌ ವಿಷ್ಣುಗೌಡ ಎಂಬಾತನ ಪರಿಚಯವಾಗಿದೆ.. ಈತ ಪೊಲೀಸ್‌ ಡ್ರೆಸ್‌ನಲ್ಲಿ ಗನ್‌ ಹಿಡಿದ ನಿಂತಿದ್ದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದ.. ಹೀಗಾಗಿ ಮಹಿಳೆ ಈತ ಪೊಲೀಸ್‌ ಎಂದು ನಂಬಿದ್ದಳು.. ಆತ ಕೂಡಾ ಹಾಗೆಯೇ ನಂಬಿಸಿದ್ದ.. ಕಾಲಕ್ರಮೇಣ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು.. ಮಹಿಳೆಗೆ ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಆರೋಪಿ, ಆಕೆಯಿಂದ 41 ಲಕ್ಷ ರೂಪಾಯಿ ನಗದು ವಸೂಲಿ ಮಾಡಿದ್ದಾನೆ. ಜೊತೆಗೆ ಐದು ಲಕ್ಷ ರೂಪಾಯಿ ಮೌಲ್ಯದ ಎಲ್‌ಐಸಿ ಬಾಂಡ್‌ ಕೂಡಾ ಕಿತ್ತುಕೊಂಡಿದ್ದಾನಂತೆ..

ಇದನ್ನೂ ಓದಿ; ದಿನಕ್ಕೆ ಎರಡು ಖರ್ಜೂರ ತಿಂದರೆ ಸಾಕು ಫುಲ್‌ ಎನರ್ಜಿ ನಿಮ್ಮದಾಗುತ್ತೆ!

ಇದೀಗ ಈತನ ನಿಜ ಬಣ್ಣ ಬಯಲಾಗಿದೆ.. ಜೊತೆಗೆ ಈತ ಪೊಲೀಸ್‌ ಕೂಡಾ ಅಲ್ಲ ಅನ್ನೋದು ಗೊತ್ತಾಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.. ಈ ಬಗ್ಗೆ ಮಹಿಳೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎಂದು ತಿಳಿದುಬಂದಿದೆ..

Share Post