Rain Effetc; ಮಳೆಯಿಂದಾಗಿ ಕೆರೆಗೆ ನುಗ್ಗಿದ ಕಾರು..!; ಕಾರಿನಲ್ಲಿದ್ದವರು ಬದುಕಿದ್ದೇ ಪವಾಡ!
ಬೆಂಗಳೂರು; ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗುತ್ತಿದೆ.. ಉತ್ತರ ಕನ್ನಡ, ಉಡುಪಿ, ಮಂಗಳೂರು, ಹಾಸನ, ಮೈಸೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.. ಇದರಿಂದಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ.. ಹಲವಾರು ಕಡೆ ಮಳೆಯಿಂದ ಮನೆಗಳು ಕುಸಿದುಬಿದ್ದಿವೆ.. ಅಪಘಾತಗಳು ಹೆಚ್ಚಾಗುತ್ತಿವೆ.. ಕಾರವಾರದಲ್ಲಿ ಮಣ್ಣುಗುಡ್ಡ ಕುಸಿದು 9 ಮಂದಿ ಅದರಡಿ ಸಿಲುಕಿದ್ದಾರೆ.. ಹೀಗಿರುವಾಗಲೇ ಹಾಸನ ಜಿಲ್ಲೆಯಲ್ಲೆ ಕಾರೊಂದು ಕೆರೆಗೆ ಉರುಳಿಬಿದ್ದಿದೆ..
ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಮಠದಕೊಪ್ಪಲ್‌ನಲ್ಲಿ ಈ ದುರ್ಘಟನೆ ನಡೆದಿದೆ.. ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿದೆ.. ರಿಡ್ಜ್ ಕಾರಿನಲ್ಲಿ ನಾಲ್ಕು ಮಂದಿ ಪ್ರಯಾಣ ಮಾಡುತ್ತಿದ್ದರು.. ಮಳೆಯ ಕಾರಣದಿಂದಾಗಿ ಚಾಲನ ನಿಯಂತ್ರಣ ತಪ್ಪಿ ಕಾರು ನೇರವಾಗಿ ಕೆರೆಗೆ ಉರುಳಿದೆ. ಕೆರೆಯ ತುಂಬಾ ನೀರಿದ್ದರಿಂದ ದೊಡ್ಡ ಅನಾಹುತ ನಡೆಯುವ ಸಾಧ್ಯತೆ ಇತ್ತು.. ಆದ್ರೆ ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರೂ ಕೂಡಾ ಬಚಾವ್ ಆಗಿದ್ದಾರೆ… ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ..
ನೀರಿನಲ್ಲಿ ಮುಳುಗಿದ್ದ ರಿಡ್ಜ್ ಕಾರನ್ನು ಜೆಸಿಬಿ ಮೂಲಕ ಹೊರತೆಗೆಯಲಾಗಿದೆ.. ಇನ್ನು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಕಡೆ ಶಾಲೆಗಳು ಕೂಡಾ ಜಲಾವೃತವಾಗಿವೆ.. ಹೀಗಾಗಿ ಈ ಭಾಗದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ..