BusinessEconomy

ಚಿನ್ನದ ಸಾಲ ನಮಗೆ ನೆರವಾಗುತ್ತಾ..? ಅಥವಾ ಸಂಕಷ್ಟದಲ್ಲಿ ಮುಳುಗಿಸುತ್ತಾ..?

ಬೆಂಗಳೂರು; ಬೇರೆ ಯಾವ ವಸ್ತುವಿದ್ದರೂ ನಮಗೆ ಕ್ಷಣದಲ್ಲಿ ಅದನ್ನು ಮಾರಿ ಹಣ ಪಡೆಯೋದಕ್ಕೆ ಆಗೋದಿಲ್ಲ.. ಚಿನ್ನದಿಂದ ಮಾತ್ರ ಇದು ಸಾಧ್ಯ.. ಚಿನ್ನ ಅಡ ಇಟ್ಟರೆ ಕ್ಷಣದಲ್ಲಿ ಯಾರು ಬೇಕಾದರೂ ಹಣ ಕೊಡುತ್ತಾರೆ.. ಹೀಗಾಗಿಯೇ ಚಿನ್ನ ಆಪದ್ಭಾಂಧವ ಎಂದು ಕರೆಯುತ್ತಾರೆ.. ಅವಶ್ಯಕತೆ ಬಿದ್ದಾಗ ಚಿನ್ನವನ್ನು ಅಡವಿಟ್ಟು, ಹಣ ಬಂದ ಮೇಲೆ ಅದನ್ನು ಬಿಡಿಸಿಕೊಂಡು ಬರುವ ಕೆಲಸವನ್ನು ಎಲ್ಲರೂ ಮಾಡುತ್ತಾರೆ.. ಆದ್ರೆ ಚಿನ್ನದ ಸಾಲದಿಂದ ನಮಗೆ ಲಾಭ ಇದೆಯಾ..? ಅಥವಾ ನಷ್ಟ ಇದೆಯಾ..? ಅನ್ನೋದನ್ನು ನೋಡೋಣ…

ಚಿನ್ನದ ಸಾಲವನ್ನು ಹಲವಾರು ಕಡೆ ಪಡೆಯಬಹುದು.. ಬ್ಯಾಂಕ್‌ಗಳಲ್ಲಿ ಚಿನ್ನದ ಸಾಲ ಕೊಡುತ್ತಾರೆ.. ಜೊತೆಗೆ ಖಾಸಗಿ ಫೈನಾನ್ಸ್‌ ಕಂಪನಿಗಳು ಚಿನ್ನ ಅಡವಿಟ್ಟುಕೊಂಡು ಸಾಲ ಕೊಡುತ್ತವೆ.. ಖಾಸಗಿ ವ್ಯಕ್ತಿಗಳು ಕೂಡಾ ಚಿನ್ನ ಆಧಾರವಾಗಿಟ್ಟುಕೊಂಡು ಸಾಲ ಕೊಡುತ್ತಾರೆ.. ಇದರ ಜೊತೆ ಚಿನ್ನಕ್ಕೆ ಸಾಲ ಕೊಡುವ ಪ್ರತ್ಯೇಕ ಕಂಪನಿಗಳೇ ಇವೆ..

ತಿಂಗಳು, ದಿನ, ವರ್ಷದ ಲೆಕ್ಕದಲ್ಲಿ ಬಡ್ಡಿ ಹಾಕುವವವರು ಇದ್ದಾರೆ.. ಖಾಸಗಿಯವರಿಂದ ಸಾಲ ಪಡೆದರೆ ಹೆಚ್ಚು ಬಡ್ಡಿಯಾಗುತ್ತದೆ.. ಅದು ಕಟ್ಟಡದಿಂದ ಬಡ್ಡಿಗೆ ಬಡ್ಡಿ ಬೆಳೆಯುತ್ತದೆ.. ಇದರಿಂದ ಅದನ್ನು ಹಿಂತಿರುಗಿಸಲಾಗದೇ ಚಿನ್ನ ಸಾಲ ಕೊಟ್ಟವರ ಪಾಲಾಗುತ್ತದೆ.. ಇನ್ನು ಖಾಸಗಿ ಕಂಪನಿಗಳು ಕೂಡಾ ಅಷ್ಟೇ.. ಕಡಿಮೆ ಬಡ್ಡಿ ದರಕ್ಕೆ ಚಿನ್ನದ ಸಾಲ ಕೊಡುತ್ತೇವೆ ಎಂದು ಹೇಳುತ್ತವೆ.. ಆದ್ರೆ ಅವು ನಮಗೆ ಗೊತ್ತಿಲ್ಲದೆ ಬೇರೆ ಬೇರೆ ಚಾರ್ಜಸ್‌ ಹಾಕುತ್ತವೆ.. ಒಂದು ವೇಳೆ ಒಂದೆರಡು ತಿಂಗಳು ಬಡ್ಡಿ ಕಟ್ಟದಿದ್ದರೆ, ಅದಕ್ಕೆ ಫೈನ್‌ ಅದೂ ಇದೂ ಅಂತ ಹಾಕಿ ದೊಡ್ಡ ಮೊತ್ತ ಮಾಡಿರುತ್ತಾರೆ.. ಅದನ್ನು ನೀವು ಕಟ್ಟಲಾಗದೇ ಚಿನ್ನವನ್ನು ಅರಿಗೇ ಮಾರಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ..

ಹೀಗಾಗಿ ಚಿನ್ನದ ಮೇಲೆ ದಾಳ ಬೇಗೆ ಸಿಗುತ್ತೆ ಅಂತ ಎಲ್ಲೆಂದರಲ್ಲಿ ಅಡ ಇಡಬಾರದು.. ಬ್ಯಾಂಕ್‌ಗಳಲ್ಲಿ ಚಿನ್ನ ಅಡ ಇಟ್ಟರೆ ಅದು ಸೇಫ್‌.. ಯಾಕಂದ್ರೆ, ಬ್ಯಾಂಕ್‌ಗಳನ್ನು ಕಾನೂನು ಮೀರಿ ಹೋಗುವುದಿಲ್ಲ.. ಯಾವುದೇ ಆಗಲೀ ನಿಮಗೆ ಮಾಹಿತಿ ಕೊಟ್ಟೇ ಮಾಡುತ್ತವೆ.. ಹಿಡನ್‌ ಚಾರ್ಜಸ್‌ ಇರೋದಿಲ್ಲ.. ಅಷ್ಟೇ ಅಲ್ಲ, ಬಡ್ಡಿ ಕೂಡಾ ಪಾರದರ್ಶಕವಾಗಿರುತ್ತದೆ.. ಒಂದಷ್ಟು ತಿಂಗಳು ಬಡ್ಡಿ ಕಟ್ಟದಿದ್ದರೂ ಏನೂ ತೊಂದರೆಯಾಗೋದಿಲ್ಲ.. ಸಣ್ಣ ಪ್ರಮಾಣದಲ್ಲಿ ಚಾರ್ಜಸ್‌ ಹಾಕ್ತಾರೆ ಅಷ್ಟೇ.. ಹೀಗಾಗಿ ಚಿನ್ನದ ಸಾಲಕ್ಕೆ ಬ್ಯಾಂಕ್‌ಗಳನ್ನೇ ಆಶ್ರಯಿಸುವುದು ಒಳ್ಳೆಯದು..

ಚಿನ್ನದ ಸಾಲ ಒಳ್ಳೆಯದೇ ಆದ್ರೆ, ನಾವು ಬ್ಯಾಂಕ್‌ಗಳಲ್ಲಿ ಮಾತ್ರ ಅಡ ಇಟ್ಟರೆ ಒಳ್ಳೆಯದು.. ಬೇರೆ ಕಡೆ ಅಡ್‌ ಇಟ್ಟರೆ ಅದು ನಮಗೆ ವಾಪಸ್‌ ಸಿಗೋದು ಕಷ್ಟವೇ ಆಗುತ್ತದೆ..

Share Post