ಪ್ರಿಯಕರನ ಜೊತೆ ಮಹಿಳೆಯ ಪಲ್ಲಂಗದಾಟ!; ಪ್ರಶ್ನಿಸಿದ ಗಂಡನ ಬರ್ಬರ ಹತ್ಯೆ!
ನೋಯ್ಡಾ; ಪರ ಪುರುಷನ ಜೊತೆ ಹೆಂಡತಿ ಪಲ್ಲಂಗದಾಟ ಆಡುತ್ತಿರುವುದನ್ನು ಗಂಡ ನೋಡಿದ್ದಾನೆ.. ಇದರಿಂದ ಆಕ್ರೋಶಗೊಂಡು ಪ್ರಶ್ನೆ ಮಾಡಿದ್ದಾನೆ.. ಇದರಿಂದ ತಿರುಗಿಬಿದ್ದ ಪತ್ನಿ, ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ..
ಗ್ರೇಟರ್ ನೋಯ್ಡಾದ ಎಟಿಎಸ್ ವೃತ್ತದ ಬಳಿ ಈ ಕೃತ್ಯ ಎಸಗಲಾಗಿದೆ.. ಕತ್ತರಿಯಿಂದ ಪತಿಯನ್ನು ಕ್ರೂರವಾಗಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.. ಪೂಜಾ ಮತ್ತು ಪ್ರಹ್ಲಾದ್ ಎಂಬುವವರೇ ಕೊಲೆ ಆರೋಪಿಗಳಾಗಿದ್ದಾರೆ.. ಇವರು ವಾರದ ಹಿಂದೆ ಕೊಲೆ ಮಾಡಿ ಪರಾರಿಯಾಗಿದ್ದರು.. ಇದೀಗ ಇವರನ್ನು ಪೊಲೀಸರು ಪತ್ತೆ ಹಚ್ಚಿ ಬೇಡಿ ತೊಡಿಸಿದ್ದಾರೆ..
ಮಹೇಶ್ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಪತ್ನಿ ಪೂಜಾ ಮತ್ತು ಪೂಜಾ ಪ್ರಿಯಕರ ಪ್ರಹ್ಲಾದ್ ಒಂದೇ ಊರಿನವರು ಎಂದು ತಿಳಿದುಬಂದಿದೆ.. ಮಹೇಶ್‍ನನ್ನು ಮದುವೆಯಾದ ಪೂಜಾ ಪತಿಯ ಜೊತೆ ಗ್ರೇಟರ್ ನೋಯ್ಡಾದ ಬಿರೋಂಡಾಕ್ಕೆ ಬಂದಿದ್ದಳು.. ಅಲ್ಲಿ ಪೌರ ಕಾರ್ಮಿಕನಾಗಿ ಮಹೇಶ್ ಕೆಲಸ ಮಾಡುತ್ತಿದ್ದ.. ಊರಿನಲ್ಲಿದ್ದಾಗಲೇ ಪೂಜಾ-ಪ್ರಹ್ಲಾದ್ ನಡುವೆ ಪ್ರೀತಿ ಇತ್ತು ಎನ್ನಲಾಗಿದೆ.. ಪೂಜಾ ತನ್ನ ಗಂಡನಿಗೆ ಹೇಳಿ ಪ್ರಹ್ಲಾದ್‌ನನ್ನು ಕರೆಸಿಕೊಂಡು ಕೆಲಸ ಕೊಡಿಸಿದ್ದಳು.. ಊರಿನವನು ಎಂದಷ್ಟೇ ಪರಿಚಯಿಸಿದ್ದ ಪೂಜಾ, ಗಂಡ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಪ್ರಹ್ಲಾದ್ ಜೊತೆ ಚಕ್ಕಂದ ಆಡುತ್ತಿದ್ದಳು..