CrimeDistricts

ಪರಸ್ತ್ರೀ ಜೊತೆ ಲಾಡ್ಜ್‌ಗೆ ಬಂದಿದ್ದ ವಿವಾಹಿತ ಸಂಶಯಾಸ್ಪದ ಸಾವು!

ಚಿತ್ರದುರ್ಗ; ಪರ ಸ್ತ್ರೀ ಜೊತೆ ಲಾಡ್ಜ್‌ಗೆ ಬಂದಿದ್ದ ವಿವಾಹಿತ ವ್ಯಕ್ತಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾನೆ.. ಚಿತ್ರದುರ್ಗದ ಸರ್ಕಾರಿ ಬಸ್‌ ನಿಲ್ದಾಣದ ಎದುರಿಗೆ ಇರುವ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ.. ಪೊಲೀಸರು ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ..

ಹರಿಹರ ಮೂಲದ ಗೋಪಾಲ ಎಂಬಾತನೇ ಸಾವನ್ನಪ್ಪಿದ ವ್ಯಕ್ತಿ.. ಈತ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ವಿವಾಹಿತ ಮಹಿಳೆ ಜೊತೆ ಲಾಡ್ಜ್‌ಗೆ ಬಂದಿದ್ದ ಎಂದು ತಿಳಿದುಬಂದಿದೆ.. ಈ ಮಹಿಳೆ ಗೋಪಾಲ್‌ಗೆ ಆರು ತಿಂಗಳ ಹಿಂದೆ ಪರಿಚಯವಾಗಿದ್ದು, ದೈಹಿಕ ಸಂಬಂಧ ಕೂಡಾ ಹೊಂದಿದ್ದರು ಎಂದು ತಿಳಿದುಬಂದಿದೆ..

ಮೃತ ಗೋಪಾಲ್‌ ಐದು ವರ್ಷಗಳ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬಾಕೆಯನ್ನು ವರಿಸಿದ್ದ. ಆದ್ರೂ ಕೂಡಾ ಗೋಪಾಲ್‌ ರಾಣೆಬೆನ್ನೂರಿನ ಪವಿತ್ರ ಎಂಬಾಕೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.. ಜುಲೈ 4ರ ಮಧ್ಯಾಹ್ನ 3:11ಕ್ಕೆ ಲಾಡ್ಜ್‌ಗೆ ಇಬ್ಬರೂ ಬಂದಿದ್ದರು.. ಈ ವೇಳೆ ಗೋಪಾಲ್‌ ಎದೆನೋವೆಂದು ಕುಸಿದುಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ..

ಚಿತ್ರದುರ್ಗ ನಗರ ಪೊಲೀಸರು ಪವಿತ್ರಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share Post