CrimeNational

12 ಗಂಟೆ ವಿಮಾನದಲ್ಲೇ ಲಾಕ್‌ ಆದ ಪ್ರಯಾಣಿಕರು!; ದೆಹಲಿಯಿಂದ ಬೆಂಗಳೂರಿಗೆ ಬರಲೇ ಇಲ್ಲ!

ದೇವನಹಳ್ಳಿ; ದೆಹಲಿಯಿಂದ ಬೆಂಗಳೂರಿಗೆ ನಿನ್ನೆ ಸಂಜೆ 7.40ಕ್ಕೆ ಹೊರಡಬೇಕಿದ್ದ ವಿಮಾನದಲ್ಲಿ ಪ್ರಯಾಣಿಕರು ಸುಮಾರು 12 ಗಂಟೆಗಳ ಕಾಲ ಲಾಕ್‌ ಆಗಿ ಪರದಾಡಿದ್ದಾರೆ.. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ 3ರಿಂದ ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ವಿಮಾನ ನಿನ್ನೆ ರಾತ್ರಿ 7.40ಕ್ಕೆ ಟೇಕಾಫ್‌ ಆಗಬೇಕಿತ್ತು.. ಆದ್ರೆ, ಇಂದು ಬೆಳಗ್ಗೆ 7 ಗಂಟೆಯಾದರೂ ವಿಮಾನ ಟೇಕಾಫ್‌ ಆಗಿಲ್ಲ.. ಸಾಲದೆಂಬಂತೆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಹೊರಬಿಡದೇ ರಾತ್ರಿಯೆಲ್ಲಾ ವಿಮಾನದಲ್ಲಿ ಕೂರಿಸಲಾಗಿತ್ತು ಎಂದು ತಿಳಿದುಬಂದಿದೆ..

SG 8151ನ ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ.. ಇದ್ರಲ್ಲಿ ಸುಮಾರು 60 ಪ್ರಯಾಣಿಕರಿದ್ದು, 12 ಗಂಟೆಗಳಿಗೂ ಹೆಚ್ಚು ಸಮಯ ಅವರು ವಿಮಾನದಲ್ಲೇ ಕಳೆದಿದ್ದಾರೆ.. ವಿಮಾನದ ಬಾಗಿಲು ತೆಗೆಯದೇ, ಜೊತೆಗೆ ಅವರಿಗೆ ಊಟ, ತಿಂಡಿಯ ವ್ಯವಸ್ಥೆಯೂ ಮಾಡದೇ ವಿಮಾನದಲ್ಲೇ ಕೂರಿಸಲಾಗಿದೆ.. ತಾಂತ್ರಿಕ ದೋಷದ ನೆಪವೊಡ್ಡಿ ಈ ರೀತಿ ಮಾಡಲಾಗಿದ್ದು, ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ..

ಏನಾಗಿದೆ ಎಂಬುದರ ಮಾಹಿತಿಯೂ ಸಿಗದೇ ಪ್ರಯಾಣಿಕರು ಪರದಾಡಿದ್ದಾರೆ.. ವಿಮಾನ ಹೈಜಾಕ್‌ ಆಗಿದೆಯಾ ಎಂದೂ ಪ್ರಶ್ನೆ ಮಾಡಿದ್ದಾರೆ.. ಇನ್ನು ಏಳೆಂಟು ಬಾರಿ ಬೋರ್ಡಿಂಗ್ ಪಾಸ್ ಬದಲಾಯಿಸಿರುವ ಆರೋಪ ಕೂಡಾ ಕೇಳಿ ಬಂದಿದೆ..

 

Share Post