ತಮಿಳುನಾಡು ಬಿಎಸ್‌ಪಿ ರಾಜ್ಯಾಧ್ಯಕ್ಷನ ಭೀಕರ ಹತ್ಯೆ!
ಚೆನ್ನೈ; ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ.. ಪೆರಂಬೂರಿನಲ್ಲಿರುವ ಅಧ್ಯಕ್ಷ ನಿವಾಸದ ಬಳಿಯೇ ದುಷ್ಕೃತ್ಯ ನಡೆದಿದೆ..
ಎಂಟು ಮಂದಿ ಅಪರಿಚಿತರು ಏಕಾಏಕಿ ಆರ್ಮ್ ಸ್ಟ್ರಾಂಗ್ ಅವರ ಮೇಲೆ ದಾಳಿ ನಡೆಸಿದ್ದು, ಅವರನ್ನು ಚಾಕುವಿನಿಂದಿ ಇರಿದು ಕೊಂದಿದೆ.. ಇದರಿಂದಾಗಿ ಆರ್ಮ್‌ಸ್ಟ್ರಾಂಗ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಕೃತ್ಯಕ್ಕೆ ಕಾರಣ ಏನು ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ..
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ, ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಈ ನಡುವೆ ಎಂಟು ಮಂದಿ ಆರೋಪಿಗಳೂ ಕೂಡಾ ತಾವೇ ಬಂದು ಪೊಲೀಸರಿಗೆ ಶರಣಾಗಿದ್ದಾರೆ..