ಆತ್ಮಹತ್ಯೆಗೆ ಶರಣಾದ ರೋಬೋಟ್; ಕಾರಣ ಏನು ಗೊತ್ತಾ..?
ಇದೇ ಮೊದಲ ಬಾರಿಗೆ ರೋಬೋಟ್ ಒಂದು ಆತ್ಮಹತ್ಯೆ ಮಾಡಿಕೊಂಡಿದೆ. ರೋಬೋಟ್ ಮೆಟ್ಟಿಲುಗಳ ಮೇಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದೆ.. ಅದರ ಬಿಡಿ ಭಾಗಗಳನ್ನು ಸಂಗ್ರಹಿಸಿ ಆತ್ಮಹತ್ಯೆಗೆ ಕಾರಣ ಹುಡುಕಲಾಗುತ್ತಿದೆ.
ಮನುಷ್ಯರು ಹಾಗೂ ಭಾವನೆಗಳನ್ನು ಹೊಂದಿರುವ ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವು. ಆದ್ರೆ ಇದೇ ಮೊದಲ ಬಾರಿಗೆ ಭಾವನೆ ತುಂಬಿದ್ದ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ..
ಮಧ್ಯ ದಕ್ಷಿಣ ಕೊರಿಯಾದ ಪುರಸಭೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೋಬೋಟ್ ಮೆಟ್ಟಿಲುಗಳ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದೆ.