BengaluruCrime

ಬೆಂಗಳೂರು-ಮೈಸೂರು ಹೆದ್ದಾರಿ; ಒಂದೇ ತಿಂಗಳಲ್ಲಿ 9 ಕೋಟಿ ರೂ. ದಂಡ ವಸೂಲಿ!

ಬೆಂಗಳೂರು; ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 9 ಕೋಟಿ ರೂಪಾಯಿ ದಂಡ ಸಂಗ್ರಹ ಮಾಡಲಾಗಿದೆ.. ಈ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದ್ದು, ದಂಡ ಸಂಗ್ರಹವೂ ಜಾಸ್ತಿಯಾಗುತ್ತಿದೆ,,

ಅನೇಕ ವಾಹನ ಚಾಲಕರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.. ಇದರಿಂದಾಗಿ ಕಳೆದ ಒಂದು ತಿಂಗಳಲ್ಲಿ 8.99 ಕೋಟಿ ರೂಪಾಯಿ ದಂಡ ಸಂಗ್ರಹ ಮಾಡಲಾಗಿದೆ..  ಜೂನ್ 1 ರಿಂದ ಜೂ.30ರವರೆಗಿನ ದಂಡ ವಸೂಲಾತಿ ಇದಾಗಿದೆ.. ಈ ವೇಳೆಯಲ್ಲಿ 1,61,491 ಪ್ರಕರಣಗಳನ್ನು ದಾಖಲಿಸಲಾಗಿದೆ.. ಸೀಟು ಬೆಲ್ಟ್ ಧರಿಸದ ಪ್ರಕರಣಗಳೇ ಹೆಚ್ಚು ಎಂದು ತಿಳಿದುಬಂದಿದೆ..

ಯಾವ್ಯಾವ ಕಾರಣಕ್ಕೆ ಎಷ್ಟು ಕೇಸ್‌..?

==========================

ಪಥ ಶಿಸ್ತು ಉಲ್ಲಂಘನೆ – 12,609
ಬೈಕ್‌ನಲ್ಲಿ ತ್ರಿಪಲ್‌ ರೈಡಿಂಗ್ – 1,087
ಹೆಲ್ಮೆಟ್ ಧರಿಸದೆ ಸವಾರಿ – 9, 079
ಅತೀ ವೇಗದ ಚಾಲನೆ – 7,671
ವಿರುದ್ಧ ದಿಕ್ಕಿನಲ್ಲಿ ಸಂಚಾರ – 07
ನೋ ಎಂಟ್ರಿ ಪ್ರಕರಣ – 577

 

Share Post