10 ಜನರ ಪ್ರಾಣ ಉಳಿಸಿದ ಪುನೀತ್ ರಾಜ್ಕುಮಾರ್ ಹೃದಯಜ್ಯೋತಿ ಯೋಜನೆ!
ಬೆಂಗಳೂರು; ದಿವಂಗತ ನಟ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಿಂದಾಗಿ ಇದುವರೆಗೆ ಹತ್ತು ಮಂದಿಯ ಪ್ರಾಣ ಉಳಿದಿದೆ.. ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ 45 ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿ ಮಾಡಲಾಗಿದ್ದು, ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಜೀವ ರಕ್ಷಕವಾಗಿರುವ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಈಗ ಲಭ್ಯವಿದ್ದು, ಗೋಲ್ಡನ್ ಅವರ್ನಲ್ಲಿ 10 ಜನರಿಗೆ ಈ ಚುಚ್ಚು ಮದ್ದು ನೀಡಿ ವೈದ್ಯರು ಜೀವ ಉಳಿಸಿದ್ದಾರೆ..
71 ತಾಲೂಕು ಆಸ್ಪತ್ರೆಗಳೂ ಸೇರಿದಂತೆ ಒಟ್ಟು 86 ಸರಕಾರಿ ಆಸ್ಪತ್ರೆಗಳನ್ನು ಈ ಯೋಜನೆಯಲ್ಲಿ ಸ್ಪೋಕ್ ಕೇಂದ್ರಗಳನ್ನಾಗಿ ಮಾಡಲಾಗಿದೆ.. ಇನ್ನು ಜಯದೇವ ಹಾಗೂ ಇತರ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್ ಕೇಂದ್ರಗಳನ್ನಾಗಿ ಮಾಡಲಾಗಿದೆ.. ಈ ಆಸ್ಪತ್ರೆಗಳಿಗೆ ಹೃದಯಾಘಾತವಾದ ತಕ್ಷಣ ಕರೆದುಕೊಂಡು ಬಂದರೆ, 6 ನಿಮಿಷದೊಳಗೆ ಎಐ ತಂತ್ರಜ್ಞಾನದ ಮೂಲಕ ರೋಗಿಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ.. ತೀವ್ರ ಹೃದಯಾಘಾತವಾಗುವ ಮೂನ್ಸೂಚನೆ ದೊರೆತರೆ ಅವರಿಗೆ ಈ ಚಿಕಿತ್ಸೆ ನೀಡಲಾಗುತ್ತದೆ..
ಈ ಟೆನೆಕ್ಟೆಪ್ಲೇಸ್ ಚುಚ್ಚುಮದ್ದಿನ ಬೆಲೆ 25 ಸಾವಿರ ರೂಪಾಯಿ ಆಗಿದ್ದು, ಇದುವರೆಗೆ ಒಟ್ಟು 10 ಜನರ ಜೀವವನ್ನು ಕಾಪಾಡಲಾಗಿದೆ..